Latest

*ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರವನ್ನೂ ಬಿಜೆಪಿ ಸರ್ಕಾರ ತಿಂದು ಕೊಬ್ಬುತ್ತಿದೆ: ಕಾಂಗ್ರೆಸ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರ ಪದಾರ್ಥ ಪೂರೈಸಲು ಕೇವಲ ಮೂರು ಮಹಿಳಾ ಸಂಘಗಳಿಗೆ ಅನುಮತಿ ನೀಡಿರುವ ಸರಕಾರ, ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರವನ್ನೂ ಬಿಜೆಪಿ ಸರ್ಕಾರ ತಿಂದು ಕೊಬ್ಬುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಹಿಂದೆ ಕಳಪೆ ಆಹಾರ ಪೂರೈಕೆ ಮಾಡಿ ಕಪ್ಪುಪಟ್ಟಿಗೆ ಸೇರಿದ್ದ ತಮಿಳುನಾಡು ಮೂಲದ ಸಂಸ್ಥೆಗೆ ಪುನಃ ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಕಳಪೆ ಆಹಾರ ಪೂರೈಕೆಯ ಹಿಂದೆ ಭ್ರಷ್ಟಾಚಾರ ಅಡಗಿದೆ, ಸುಪ್ರೀಂ ಕೋರ್ಟಿನ ಆದೇಶದ ವಿರುದ್ಧವಾಗಿ, ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗಳಿಗೆ ಆಹಾರ ಪೂರೈಕೆಯ ಹೊಣೆ ಹೊರಿಸಿದ್ದರ ಹಿಂದೆ 40 ಶೇಕಡಾ ಕಮಿಷನ್ ಕೆಲಸ ಮಾಡುತ್ತಿದೆಯೇ? ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಪ್ರಶ್ನಿಸಿದೆ.

Home add -Advt

*ಸಂಸತ್ ಅಧಿವೇಶನದಲ್ಲಿ ಕೋಲಾಹಲ*

https://pragati.taskdun.com/mallikarjuna-khargebjpparliament-session/

Related Articles

Back to top button