ಪ್ರಗತಿವಾಹಿನಿ ಸುದ್ದಿ: ಮಂಡ್ಯ: ದೇಶಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊರೊನಾ ತಡೆಗಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಮನೆಯಿಂದ ಹೊರಬರದಂತೆ ಆದೇಶ ನೀಡಿದ್ದರೂ ಕೆಲವೆಡೆ ಜನರು ಅನಗತ್ಯವಾಗಿ ಓಡಾಡುತ್ತಿದ್ದರೆ, ಇನ್ನು ಕೆಲವೆಡೆ ಜನರಿಗೆ ಮಾಂಸ ಖರೀದಿಯ ಸಂಭ್ರಮ. ಮತ್ತೆ ಕೆಲವರಿಗೆ ಮೀನು ಖರೀದಿಸಿ ತಿನ್ನುವ ಆತುರ.
ಅಪಾಯಕಾರಿ ವೈರಸ್ ನಿಂದ ರಕ್ಷಿಸಿಕೊಳ್ಳಲು ಮನೆಯಿಂದ ಹೊರ ಬಾರದಂತೆ ಜನರಿಗೆ ಎಷ್ಟೇ ಮನವಿ ಮಾಡಿದರೂ ಕ್ಯಾರೇ ಎನ್ನದ ಮಂಡ್ಯಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಜನತೆ ಇಂದು ಮೀನು ಖರೀದಿಗಾಗಿ ಮುಗಿಬಿದ್ದ ಘಟನೆ ನಡೆದಿದೆ.
ಮೀನು ಮಾರಾಟಕ್ಕೆ ತಂದಿದ್ದ ಗಾಡಿಯ ಸುತ್ತ ತಾ ಮುಂದು, ನಾ ಮುಂದು ಎಂದು ಗುಂಪು ಗುಂಪಾಗಿ ಬಂದು ಗ್ರಾಮದ ಜಾನರು ಮುಗಿಬಿದ್ದು ಮೀನು ಖರಿದಿಸಿದ್ದಾರೆ. ಇದೇ ವೇಳೆ ಮೀನಿಗಾಗಿ ಗ್ರಾಮಸ್ಥರು ಪರಸ್ಪರ ಕೈಕೈ ಮಿಲಾಯಿಸಿದ ಘಟನೆಯೂ ನಡೆದಿದೆ. ಇಷ್ಟಾಗ್ಯೂ ಸ್ಥಳೀಯ ಅಧಿಕಾರಿಗಳು, ಪೊಲೀಸರು ಮಾತ್ರ ಇತ್ತ ಸುಳಿಯಲೂ ಇಲ್ಲ.
ಕೊರೋನಾ ವೈರಸ್ ಹರಡದಂತೆ ಸರ್ಕಾರ ಇಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನತೆ ಮಾತ್ರ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ