CrimeKarnataka NewsLatest

*ವಿದ್ಯಾರ್ಥಿನಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ*: *ಉಪನ್ಯಾಸಕನ ಹುಚ್ಚಾಟಕ್ಕೆ ಬಿತ್ತು ಧರ್ಮದೇಟು*: *ತಲೆ ಚಚ್ಚಿಕೊಂಡು ಡ್ರಾಮಾ ಮಾಡಿದ ಆರೋಪಿ*

ಪ್ರಗತಿವಾಹಿನಿ ಸುದ್ದಿ: ಕಾಲೇಜು ವಿದ್ಯಾರ್ಥಿನಿಯರಿಗೆ ಐ ಲವ್​ ಯೂ ಚಿನ್ನು ಎಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಥಳಿಸಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಗಂಗೂ ಎಂಬ ಉಪನ್ಯಾಸಕ ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕಾಲೇಜಿನಲ್ಲಿಯೇ ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ತಾನು ಸಿಕ್ಕಿ ಹಾಕಿಕೊಳ್ಳುತ್ತಿದ್ದಂತೆ ಉಪನ್ಯಾಸಕ ಗೋಡೆಗೆ, ಕಬ್ಬಿಣದ ಕಪಟಿಗೆ ತಲೆ ಚ್ಚಿಕೊಂಡು ನಾಟಕವಾಡಿದ್ದಾನೆ. ಸದ್ಯ ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ, ವಿದ್ಯಾರ್ಥಿನಿಯರ ಮೊಬೈಲ್ ನಂಬರ್​ ಪಡೆದು ಚಾಟಿಂಗ್ ಮಾಡುತ್ತಿದ್ದ. ಐ ಲವ್ ಯೂ, ಐ ಲೈಕ್​ ಯೂ, ಐ ಲವ್​ ಯೂ ಚಿನ್ನು ಎಂದೆಲ್ಲಾ ಉಪನ್ಯಾಸಕ ಮೆಸೇಜ್ ಮಾಡಿದ್ದಾರೆ. ಇತ್ತ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಸಿಟ್ಟಿಗೆದ್ದು ಗ್ರಹಚಾರ ಬಿಡಿಸಿದ್ದಾರೆ.

Related Articles

Back to top button