ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಓಂ ಶಕ್ತಿ ದೇವಸ್ಥಾನದಿಂದ ವಾಪಸ್ ಆಗಿರುವ ನೂರಕ್ಕೂ ಹೆಚ್ಚು ಯಾತ್ರಾರ್ಥಿಗಳಲ್ಲಿ ಕೋರೊನಾ ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಪೊಲೀಸ್ ಉನ್ನತಾಧಿಕಾರಿಗಳಿಗೂ ಸೋಂಕು ಹರಡಿರುವುದು ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.
ಎಸ್ ಪಿ ಎನ್.ಯತೀಶ್, ಎ ಎಸ್ ಪಿ ಧನಂಜಯ್, ಮಂಡ್ಯ ಡಿವೈ ಎಸ್ ಪಿ ಮಂಜುನಾಥ್, ಮಳವಳ್ಳಿ ಡಿವೈ ಎಸ್ ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ, ಬೆಳ್ಳೂರು ಪಿಎಸ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾಲು ಸಾಲು ಪೊಲೀಸ್ ಅಧಿಕಾರಿಗಳು ಹೋಂ ಐಸೋಲೇಷನ್ ಆಗಿದ್ದಾರೆ.
ಇತ್ತೀಚೆಗೆ ಮಂಡ್ಯ ಡಿಎ ಆರ್ ಆವರಣದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆದಿತ್ತು. ಕ್ರೀಡಾಕೂಟದ ಬಳಿಕ ಯುವಜನೋತ್ಸವ ಆಯೋಜಿಸಲಾಗಿತ್ತು. ಯುವಜನೋತ್ಸವ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳಿಗೆ ಇದೀಗ ಕೋವಿಡ್ ಪಾಸಿಟಿವ್ ಬಂದಿದೆ. ಹಿರಿಯ ಅಧಿಕಾರಿಗಳಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೂ ಕೊರೊನಾ ಆತಂಕ ಎದುರಾಗಿದೆ.
ರಾಜ್ಯ ಸರಕಾರದ ಸೂಚನೆ: ಬೆಳಗಾವಿಯಲ್ಲಿ ಆಸ್ಪತ್ರೆಗಳ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ