Karnataka News

*ವಿ.ಸಿ.ನಾಲೆಯಲ್ಲಿ ಮತ್ತೊಂದು ದುರಂತ: ಕಾರೊಳಗೆ ತಂದೆ, ಇಬ್ಬರು ಮಕ್ಕಳ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ವಿ.ಸಿ.ನಾಲೆಯಲ್ಲಿ ಪತ್ತೆಯಾದ ಕಾರಿನೊಳಗಡೆ ತಂದೆ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆಎರ್.ಎಸ್ ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಬಳಿ ವಿ.ಸಿ.ನಾಲೆಯಲ್ಲಿ ಈ ಘಟನೆ ನಡೆದಿದೆ.

Home add -Advt

ವಿ.ಸಿ.ನಾಲೆಯಲ್ಲಿ ಮುಳುಗಿದ್ದ ಕಾರಿನೊಳಗಡೆ ತಂದೆ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಮಕ್ಕಳಾದ ಅಧ್ವೈತ್ (8) ಹಾಗೂ ಅಕ್ಷತಾ (3) ಎಂದು ಗುರುತಿಸಲಾಗಿದೆ.

ಏ.16 ರಂದು ಮಕ್ಕಳ ಜೊತೆ ಕಾರಿನಲ್ಲಿ ಬೆಂಗಳೂರಿನಿಂದ ಕೆ.ಆರ್.ನಗರಕ್ಕೆ ಹೊರಟಿದ್ದರು. ಆದರೆ ಆ ಬಳಿಕ ಅವರ ಸುಳಿವು ಇರಲಿಲ್ಲ. ಏ.19ರಂದು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈವರೆಗೂ ಮೂವರ ಸುಳಿವಿರಲಿಲ್ಲ. ಆದರೆ ಈಗ ವಿ.ಸಿ.ನಾಲೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಮೂವರು ಶವವಾಗಿ ಪತ್ತೆಯಾಗಿದ್ದಾರೆ.

ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button