Latest

ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ; ಸ್ಫೋಟದ ಹೊಣೆಹೊತ್ತ ಉಗ್ರ ಸಂಘಟನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಉಗ್ರ ಶಾರಿಕ್ ಹಿಂದಿರುವ ಸಂಘಟನೆ ಬಗ್ಗೆ ಈಗ ಬಯಲಾಗಿದ್ದು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಶಂಕಿತ ಉಗ್ರ ಶಾರಿಕ್ ಬೆನ್ನಿಗೆ ನಿಂತಿದೆ. ಈ ಮೂಲಕ ಸ್ಫೋಟದ ಹೊಣೆ ಹೊತ್ತಿದೆ.

ಮಂಗಳೂರಿನ ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಶಾರಿಕ್ ನನ್ನು ಸಮರ್ಥಿಸಿಕೊಂಡು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಪ್ರಕಟಣೆ ಹೊರಡಿಸಿದ್ದು, ಶಾರಿಕ್ ನಮ್ಮ ಸಹೋದರ ಎಂದು ಸಂದೇಶ ರವಾನಿಸಿದೆ.

Home add -Advt

ಡಾರ್ಕ್ ವೆಬ್ ಮೂಲಕ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಘಟನೆ, ನಮ್ಮ ದಾಳಿ ಕದ್ರಿ ದೇವಸ್ಥಾನವಾಗಿತ್ತು. ಆದರೆ ಉದ್ದೇಶಿತ ಗುರಿ ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಎಂದು ತಿಳಿಸಿದೆ.

ಈ ಪೋಸ್ಟ್ ಜೊತೆ ಬಾಂಬ್ ದಾಳಿಯಲ್ಲಿ ಗಾಯಗೊಂಡಿರುವ ಶಾರಿಕ್ ನ ಎರಡು ಹಳೆಯ ಫೋಟೋಗಳನ್ನು ಅಪ್ ಲೋಡ್ ಮಾಡಲಾಗಿದೆ. ಅಲ್ಲದೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂಗೂ ಬೆದರಿಕೆ ಹಾಕಲಾಗಿದ್ದು, ನಿಮ್ಮ ಸಂತೋಷ ಅಲ್ಪಕಾಲಿಕವಾಗಿರುತ್ತದೆ. ದಬ್ಬಾಳಿಕೆ ಫಲವನ್ನು ಅನುಭವಿಸುತ್ತೀರಿ. ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆ ಕಾನೂನು, ಧರ್ಮದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧ ಪ್ರತಿಯಾಗಿ ದಾಳಿ ನಡೆಸಲಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಇಂಥದ್ದೊಂದು ಸಂಘಟನೆ ಇದೆಯೋ ಇಲ್ಲವೋ ಎಂಬ ಬಗ್ಗೆ ತಿಳಿದುಬಂದಿಲ್ಲ. ಈ ಬಗ್ಗೆ ಕರ್ನಾಟಕ ಪೊಲೀಸ್ ಕೇಂದ್ರ ಗೃಹ ಇಲಾಖೆ ಸಹಾಯ ಕೇಳಿದೆ ಎಂದು ತಿಳಿದುಬಂದಿದೆ.

ಹಾಲಿ ಶಾಸಕರಿಂದ ಮಾಜಿ ಶಾಸಕರ ಹತ್ಯೆಗೆ ಸುಪಾರಿ; ಸುರೇಶ್ ಗೌಡ ಗಂಭೀರ ಆರೋಪ

https://pragati.taskdun.com/mla-gouri-shankarsuresh-gowdasuparimurderallegation/

Related Articles

Back to top button