ಬೆಳ್ಳಿ ತೆರೆಗೆ ಬರಲಿದೆ ಮಂಗಳೂರು ಬಾಂಬ್ ಪತ್ತೆ ಪ್ರಕರಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಹಾಗೂ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಕುರಿತು ಇದೀಗ ಸಿನಿಮಾ ಬರಲಿದೆ. ‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’ ಶೀರ್ಷಿಕೆಯಡಿಯಲ್ಲಿ ಈ ಕಥೆಯನ್ನು ಬೆಳ್ಳಿ ತೆರೆಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಜನರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಎರಡು ದಿನಗಳ ಬಳಿಕ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಪೊಲೀಸ್‍ರ ಎದುರು ಶರಣಾಗಿದ್ದ. ಇದರ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಲಾಗಿದೆ.

‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’ ಅನ್ನೋ ಹೆಸರಲ್ಲಿ ನಿರ್ಮಾಪಕ ತುಳಸಿರಾಮ್ ಅವರು ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ರಾಜ್ಯದಲ್ಲಿ ಆದಿತ್ಯ ರಾವ್ ಬಾಂಬ್ ಇಟ್ಟ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿರ್ಮಾಪಕರು ಈ ಘಟನೆಯನ್ನೇ ಆಧಾರವಾಗಿಟ್ಕೊಂಡು ಆದಿತ್ಯ ಹೆಸರನ್ನೇ ಟೈಟಲ್‍ನಲ್ಲೂ ಇಟ್ಟು ಸಿನಿಮಾ ಮಾಡಲು ಮುಂದಾಗಿದ್ದಾರೆ. ಶ್ರೀನಿವಾಸ್ ಸಿನಿಮಾಸ್ ಸಂಸ್ಥೆಯ ಮೂಲಕ ಚಿತ್ರ ತೆರೆಗೆ ಬರಲಿದ್ದು, ಆದರೆ ಈ ಸಿನಿಮಾ ಯಾವಾಗ ಸೆಟ್ಟೇರಲಿದೆ? ಚಿತ್ರದ ನಿರ್ದೇಶಕರು ಯಾರು? ಆದಿತ್ಯ ಪಾತ್ರವನ್ನು ಯಾರು ನಿರ್ವಹಿಸಿಲಿದ್ದಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

Home add -Advt

Related Articles

Back to top button