Latest

2 ವರ್ಷದ ಮಗುವಿನ ಮೇಲೆ ಹೀನ ಕೃತ್ಯ; ಬಳಿಕ ಫಿಶ್ ಟ್ಯಾಂಕ್ ಗೆ ಮಗು ಬಿಸಾಕಿ ಹೋದ ಕಾಮುಕರು

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಎರಡು ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿ, ಲೈಂಗಿಕ ಕಿರುಕುಳ ನೀಡಿರುವ ಕಾಮುಕರು ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿರುವ ಹೇನ ಕೃತ್ಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ಫಿಶ್ ಕಟ್ಟಿಂಗ್ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದು, ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಈ ಕ್ಯಾಪ್ ನಿಂದ 2 ವರ್ಷದ ಹೆಣ್ಣುಮಗುವನ್ನು ಅಪಹರಿಸಿದ ಕಾಮುಕರು, ಮಗುವಿನ ಮೇಲೆ ಅಟ್ಟಹಾಸಮೆರೆದಿದ್ದಾರೆ. ಬಳಿಕ ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದಾರೆ.

ಪಾಂಡವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ಟ್ಯಾಂಕ್ ನಲ್ಲಿದ್ದ ಉಪ್ಪು ನೀರು ಸೇವಿಸಿ ಮಗು ತೀವ್ರ ಅಸ್ವಸ್ಥಗೊಂಡಿದ್ದು, ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಮಗು ಜೀವನ್ಮರಣದ ನಡುವೆ ಹೋರಾಡುತ್ತಿದೆ.

ಮಗುವನ್ನು ವೆನಲಾಕ್ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಪ್ ನಿಂದ ಚಂದನ್ ಎಂಬ ವ್ಯಕ್ತಿ ಮಗುವನ್ನು ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ರಾಜ್ಯದಲ್ಲಿಯೇ ಮೊದಲು; ಪವರ್ ಸ್ಟಾರ್ ಪುನೀತ್ ಕಣ್ಣುಗಳು ನಾಲ್ವರಿಗೆ ಅಳವಡಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button