ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪಿಹೆಚ್ ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿಯ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರು ವಿದ್ಯಾರ್ಥಿನಿಯೊಬ್ಬರು ಪ್ರಾದ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಹೆಚ್ ಡಿ ಮಾಡುತ್ತಿದ್ದರು. ಈ ಮಧ್ಯೆ ಪರಿಚಿತನಾದ ಪ್ರಾಧ್ಯಾಪಕ ಡಾ.ಕೆಂಡೂರು ಸುಧೀರ್ ಕುಮಾರ್ ತನ್ನನ್ನು ಮಾರ್ಗದರ್ಶಕನನ್ನಾಗಿ ಮಾಡಿಕೊಳ್ಳುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿದ್ದ ಎನ್ನಲಾಗಿದೆ. ವಿವಿ ಅನುಮತಿ ಕೇಳಿದಾಗ ಅವರಿಗೆ ಅರ್ಹತೆ ಇಲ್ಲ ಎಂದು ನಿರಾಕರಿಸಲಾಗಿತ್ತು.
ವಿದ್ಯಾರ್ಥಿನಿ ಪರಿಚಯ ಮಾಡಿಕೊಂಡಿದ್ದ ಸುಧೀರ್ ತನ್ನ ವರಸೆ ಆರಂಭಿಸಿದ್ದ. ವಿದ್ಯಾರ್ಥಿಗೆ ಹಾಗೂ ಆಕೆಯ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ವಿದ್ಯಾರ್ಥಿನಿ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ.
ಕಿರುಕುಳದಿಂದ ಬೆಸತ್ತ ವಿದ್ಯಾರ್ಥಿನಿ ಮಂಗಳೂರು ಸೈಬರ್ ಕ್ರೈಂ ಗೆ ದೂರು ನೀಡಿದ್ದಳು. ಇದೀಗ ಆರೋಪಿ ಪತ್ತೆ ಮಾಡಿರುವ ಮಂಗಳೂರು ಪೊಲೀಸರು ಆಂಧ್ರಪ್ರದೇಶದಲ್ಲಿ ಆರೋಪಿ ಪ್ರಾಧ್ಯಾಪಕನನ್ನು ಬಂಧಿಸಿದ್ದಾರೆ.
ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ; ಶಾರುಖ್ ಖಾನ್ ಪುತ್ರ ಎನ್ ಸಿಬಿ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ