
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಸಹೋದ್ಯೋಗಿ ಯುವತಿಗೆ ನಗ್ನ ಚಿತ್ರ ಕಳುಹಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಫಾರೂಕ್ ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾಗಿರುವ ಫಾರೂಕ್, ಸಹೊದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಪಾಂಡವೇಶ್ವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಫಾರೂಕ್ ವಾಟ್ಸಪ್ ಮೂಲಕ ನಗ್ನ ಚಿತ್ರಗಳನ್ನು ಕಳಿಸುವುದು, ಅಶ್ಲೀಲ ಸಂದೇಶ ರವಾನಿಸುವುದು, ತಾನು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸುವುದು ಮಾಡುತ್ತಿದ್ದರು. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೈಕೈ ಮುಟ್ಟು ಕಿರುಕುಳ ನೀಡುತ್ತಿದ್ದರು ಎಂದು ಯುವತಿ ಫಾರೂಕ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಯುವತಿ ದೂರಿನ ಹಿನ್ನೆಲೆಯಲ್ಲಿ ಆರೋಪಿ ಫಾರೂಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿ, ತಂಗಿಯನ್ನೇ ಗುಂಡಿಟ್ಟು ಹತ್ಯೆಗೈದ ಯುವಕ