Uncategorized

ದೇಗುಲದಲ್ಲಿ ನಗ್ನ ಧ್ಯಾನ ಮಾಡಿ ನಾಪತ್ತೆಯಾದ ಪ್ರವಾಸಿಗನಿಗಾಗಿ ತಲಾಶೆ

ಪ್ರಗತಿವಾಹಿನಿ ಸುದ್ದಿ, ಬಾಲಿ: ದೇವಸ್ಥಾನವೊಂದರಲ್ಲಿ ನಗ್ನವಾಗಿ ಕುಳಿತು ಧ್ಯಾನ ಮಾಡಿ ನಾಪತ್ತೆಯಾಗಿರುವ ವಿದೇಶಿ ಪ್ರವಾಸಿಗನಿಗಾಗಿ ಇಂಡೋನೇಷ್ಯಾ ಸರಕಾರ ಹುಡುಕಾಟ ನಡೆಸುತ್ತಿದೆ.

ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಬಾಲಿಯ ಹಿಂದೂ ದೇಗುಲದಲ್ಲಿ ವಿದೇಶಿ ಪ್ರವಾಸಿಗನೊಬ್ಬ ಬಂದು ಸಂಪೂರ್ಣ ನಗ್ನನಾಗಿ ಕುಳಿತು ಧ್ಯಾನ ಮಾಡಿದ್ದ. ಈ ಕುರಿತ ಚಿತ್ರಗಳು ಹಾಗೂ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಾಲಿ ದ್ವೀಪದಲ್ಲಿ ಹಿಂದೂ ದೇಗುಲಗಳು ವ್ಯಾಪಕ ಸಂಖ್ಯೆಯಲ್ಲಿದ್ದು ಕೆಲ ವಿದೇಶಿ ಪ್ರವಾಸಿಗರು ಇಲ್ಲಿ ಪದೇಪದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ವರ್ತಿಸುತ್ತಿರುವುದರಿಂದ ಅಲ್ಲಿನ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button