ಪ್ರಗತಿವಾಹಿನಿ ಸುದ್ದಿ, ದುಬೈ: ಪಾಮ್ ಜುಮೇರಾ ದ್ವೀಪದಲ್ಲಿ ನಿರ್ಮಿಸಲಾದ ಬೃಹತ್ ಐಷಾರಾಮಿ ಮಹಲೊಂದು 82.4 ಮಿಲಿಯನ್ ಡಾಲರ್ ಗೆ (671.5 ಕೋಟಿ ರೂ.)ಗೆ ಮಾರಾಟವಾಗಿದ್ದು, ದುಬೈನಲ್ಲಿ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಮನೆಯಾಗಿದೆ.
‘ಕಾಸಾ ಡೆಲ್ ಸೋಲ್’ ಎಂದು ಕರೆಯಲ್ಪಡುವ ವಿಲ್ಲಾ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಇದರಲ್ಲಿ ಜಿಮ್, ಸಿನಿಮಾ, ಬೌಲಿಂಗ್ ಅಲ್ಲೆ ಮತ್ತು ಜಕುಜಿಯನ್ನು ಒಳಗೊಂಡಿದೆ. ವಿಲ್ಲಾ ಜುಲೈನಲ್ಲಿ ಮಾರಾಟವಾದಾಗ 302.5 ಮಿಲಿಯನ್ ದಿರ್ಹಮ್‌ಗಳನ್ನು (82.4 ಮಿಲಿಯನ್ ಡಾಲರ್) ಗಳಿಸಿತು ಎಂದು ಡೆವಲಪರ್ ಅಲ್ಪಾಗೊ ಪ್ರಾಪರ್ಟೀಸ್ ಹೇಳಿದೆ.
ಗೌಪ್ಯತೆಯ ಕಾಳಜಿ ನಿಭಾಯಿಸುವ ನಿಟ್ಟಿನಲ್ಲಿ ಕಂಪನಿ ಖರೀದಿದಾರರ ಹೆಸರು ಬಹಿರಂಗಪಡಿಸಿಲ್ಲ.
ಈ ಹಿಂದೆ ಉದ್ಯಮಿ ಮುಖೇಶ್ ಅಂಬಾನಿ ಅವರು 10 ಬೆಡ್‌ರೂಮ್‌ಗಳ ವಿಲ್ಲಾಕ್ಕಾಗಿ 80 ಮಿಲಿಯನ್ ಪಾವತಿಸಿ ದಾಖಲೆ ನಿರ್ಮಿಸಿದ್ದರು. 8 ಬೆಡ್‌ರೂಮ್‌ಗಳ ಮಹಲಿನ ಈ ಮಾರಾಟ ಮುಖೇಶ ಅವರ ದಾಖಲೆಯನ್ನು ಮುರಿದಿದೆ.
ಸರಳ, ಸಜ್ಜನಿಕೆಯ ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪರವರಿಗೆ ಕೆ.ಯು.ಡಬ್ಲ್ಯೂ.ಜೆ ಗೌರವಾರ್ಪಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ