Karnataka News

*ಎರಡು ವರ್ಷದ ಮಗುವಿನೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆಗೆ ಯತ್ನ: ರಕ್ಷಿಸಿ ಬುದ್ಧಿವಾದ ಹೇಳಿದ ಸ್ಥಳೀಯರು*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದಷ್ಟೇ ತಂದೆಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇದೀಗ ಅಂತದ್ದೇ ಮತ್ತೊಂದು ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ. ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ತಂದೆ ಹಾಗೂ ಮಗುವಿನ ಪ್ರಾಣ ಉಳಿದಿದೆ.

ಮಂಗಳೂರು ಹೊರವಲಯದ ಫಲ್ಗುಣಿ ನದಿ ಸೇತುವೆ ಮೇಲೆ ಎರಡು ವರ್ಷದ ಮಗುವನ್ನು ಕೈಯಲ್ಲಿ ಎತ್ತಿಕೊಂಡು ನದಿಗೆ ಹಾರಿ ಆತ್ಮಹತ್ಯೆಗೆ ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೆಳಗಿಳಿಯುವಂತೆ ಹೇಳಿದ್ದಾರೆ. ಆದರೆ ವ್ಯಕ್ತಿ ‘ಯಾರೂ ಹತ್ತಿರಕ್ಕೆ ಬರಬೇಡಿ, ಬಂದರೆ ನದಿಗೆ ಹಾರಿ ಬಿಡುತ್ತೇನೆ’ ಎಂದು ಹೆದರಿಸಿದ್ದಾನೆ. ಆದರೂ ವ್ಯಕ್ತಿಯೊಬ್ಬರು ಧೈರ್ಯಮಾಡಿ ಆತನನ್ನು ಹಿಡಿಯುತ್ತಿದ್ದಂತೆ ಸ್ಥಳದಲ್ಲಿದ್ದವರೂ ಆತನನ್ನು ಹಿಡಿದು ಬುದ್ಧಿವಾದ ಹೇಳಿದ್ದಾರೆ.

ಕೈಕಂಬ ನಿವಾಸಿ ಸಂದೀಪ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಕೌಟುಂಬಿಕ ಕಲಹಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button