*ನಾನು 2ನೇ ಬಾರಿಗೆ ಸಿಎಂ ಆಗಿದ್ದೇನೆಂದು ಅನೇಕರಿಗೆ ಹೊಟ್ಟೆ ಉರಿ ಇದೆ: ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ: ನಾನು 2ನೇ ಬಾರಿಗೆ ಸಿಎಂ ಆಗಿದ್ದೇನೆಂದು ಅನೇಕರಿಗೆ ಹೊಟ್ಟೆ ಉರಿ ಇದೆ. ಇದನ್ನು ಸಹಿಸಲಾಗದೆ ವಿಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಇದೀಗ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡಲು ಏನೂ ಇಲ್ಲ. ಹಾಗಾಗಿ ಮುಡಾ ವಿಚಾರವನ್ನು ಎಳೆದು ತರುತ್ತಿದ್ದಾರೆ. ಇದನ್ನೇ ಅಕ್ರಮ ಎಂದು ಬಿಂಬಿಸಲು ಹೊರಟಿದ್ದಾರೆ. ನನ್ನ ಪತ್ನಿಗೆ ಸೈಟು ನೀಡಿರುವುದು ಹಗರಣವೇ ಅಲ್ಲ. ನನ್ನ ಪ್ರಕಾರ ಇದು ಸ್ಕ್ಯಾಂಡಲ್ ಅಲ್ಲವೇ ಅಲ್ಲ ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡುವುದಾದರೆ ಮಾಡಲಿ. ನಾನು ರಾಜಕೀಯವಾಗಿ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ಪ್ರತಿಭಟನೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ