ಪ್ರಗತಿವಾಹಿನಿ ಸುದ್ದಿ : ಬೆಂಗಳೂರಲ್ಲಿ ವಿಪರೀತ ಮಳೆ ಆಗ್ತಿದೆ. ವರುಣನ ಅಬ್ಬರಕ್ಕೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ಮಧ್ಯೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20 ಕ್ಕೂ ಹೆಚ್ಚು ವಿಮಾನಗಳ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆ ಆಗಿದೆ.
ಸೋಮವಾರ ತಡರಾತ್ರಿ ಭಾರಿ ಮಳೆ ಸುರಿದಿದ್ದು, ವಿಮಾನ ಹಾರಾಟದಲ್ಲಿ ತುಂಬಾ ತೊಂದರೆಯಾಗಿದೆ. 4 ವಿಮಾನಗಳನ್ನ ಚೆನ್ನೈಗೆ ದೈವರ್ಟ್ ಮಾಡಲಾಗಿದೆ. ದಿಲ್ಲಿಯಿಂದ ಒಂದು ಏರ್ ಇಂಡಿಯಾ ಫೈಟ್, 3 ಇಂಡಿಗೋ ವಿಮಾನ, ಹಾಗೆಯೇ ಹೈದ್ರಾಬಾದ್ ಹಾಗೂ ಚಂಡೀಘಡ ವಿಮಾನಗಳನ್ನ ಸಹ ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಥೈಲ್ಯಾಂಡ್ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನ ಸಹ ಚೆನ್ನೈಗೆ ತಿರುಗಿಸಲಾಗಿದೆ.
ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದ್ದು ವಿಮಾನ ಟೇಕ್ ಆಫ್ ಗೂ ಅನೇಕ ಸಮಸ್ಯೆ ಉದ್ಭವಿಸಿದೆ. ಏರ್ ಪೋರ್ಟ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಲ್ಯಾನ್ಸಿಂಗ್ ಹಾಗೂ ಟೇಕ್ ಆಫ್ ಬಗ್ಗೆ ತೀವ್ರ ನಿಗಾವಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ