Belagavi NewsBelgaum NewsKannada NewsKarnataka News

ಈ ಕಾರಣಕ್ಕೆ ಅನೇಕ ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ: ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಯಾರ್ಡ್ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳು, ಹಾಗೆಯೇ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.

ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 07589/07590 ಭಾಗಶಃ ರದ್ದು

ರೈಲು ಸಂಖ್ಯೆ 07589 ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಡಿಸೆಂಬರ್ 1 ರಿಂದ 31, 2024  ರವರೆಗೆ ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಗುಂತಕಲ್ ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳ್ಳುಲಿದೆ.

ರೈಲು ಸಂಖ್ಯೆ 07590 ಕದಿರಿದೇವರಪಲ್ಲಿ-ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಡಿಸೆಂಬರ್ 2, 2024 ರಿಂದ ಜನವರಿ 1, 2025 ರವರೆಗೆ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಗುಂತಕಲ್ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.  

ರೈಲು ಸಂಖ್ಯೆ 07589 ತಿರುಪತಿ- ಕದಿರಿದೇವರಪಲ್ಲಿ ರೈಲನ್ನು ನವೆಂಬರ್ 30, 2024 ರವರೆಗೆ  ಮತ್ತು ರೈಲು ಸಂಖ್ಯೆ 07590 ಕದಿರಿದೇವರಪಲ್ಲಿ-ತಿರುಪತಿ ರೈಲುಗಳನ್ನು  ಡಿಸೆಂಬರ್ 1,2024  ರವರೆಗೆ ಭಾಗಶಃ ರದ್ದುಗೊಳಿಸಲು ಈ ಹಿಂದೆ ಸೂಚಿಸಲಾಗಿತ್ತು.

ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 17333/17334 ಭಾಗಶಃ ರದ್ದು

ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಡಿಸೆಂಬರ್ 1 ರಿಂದ 31, 2024 ರವರೆಗೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮೀರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಡಿಸೆಂಬರ್ 1 ರಿಂದ 31 ರವರೆಗೆ, 2024 ರವರೆಗೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.

ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಮತ್ತು ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಜ್ ರೈಲುಗಳನ್ನು ನವೆಂಬರ್ 30, 2024 ರವರೆಗೆ ಭಾಗಶಃ ರದ್ದುಗೊಳಿಸಲು ಈ ಹಿಂದೆ ಸೂಚಿಸಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button