ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಮರಾಠಾ ಮೀಸಲಾತಿ ಕಿಚ್ಚು ಹೊತ್ತಿಕೊಂಡಿದ್ದು, ಏಪ್ರಿಲ್ 10 ನೇ ತಾರೀಖು ಬೀದರ್‌ನ ಬಾಲ್ಕಿ ಪಟ್ಟಣದಲ್ಲಿ ಬೃಹತ್ ಸಭೆ ಮಾಡುವ ಮೂಲಕ ಮರಾಠಾ ಸಮುದಾಯ ಮೀಸಲಾತಿ ಕಹಳೆ ಊದಲಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ವಿಶೇಷ ಮಾನ್ಯತೆ ಕೊಡಿಸಲು ಹೋರಾಟ ನಡೆಸುತ್ತಿದ್ದ ಮನೋಜ ದಾದಾ ಜರಾಂಗೆ ಪಾಟೀಲ್ ಭಾಲ್ಕಿಯಲ್ಲಿ ಬೃಹತ್ ಸಭೆ ನಡೆಸಲಿದ್ದಾರೆ. ಬೀದರ್ ಜಿಲ್ಲೆಯ ಮರಾಠಾ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಮರಾಠಾ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು, ಇದುವರೆಗೆ ಮರಾಠಾ ಸಮುದಾಯಕ್ಕೆ ಮಾನ್ಯತೆ ನೀಡುವ ಕೆಲಸವನ್ನು ಯಾವ ಪಕ್ಷವೂ ಮಾಡಿಲ್ಲಾ. ಹಾಗಾಗಿ 10 ನೇ ತಾರೀಖು ಸಭೆ ನಡೆಸಿ ಒಕ್ಕೊರಲಿನ ನಿರ್ಧಾರ ತೆಗೆದುಕೊಳ್ಳಲಾಗುವುದು, ನಮ್ಮ ಸಮುದಾಯಕ್ಕೆ ಯಾರೂ ಪ್ರಾಧಾನ್ಯತೆ ನೀಡುತ್ತಾರೊ ಅವರಿಗೆ ಬೆಂಬಲ ನೀಡಲು ತೀರ್ಮಾನಿಸುತ್ತೇವೆ. ಸಭೆಯಲ್ಲಿ ಸಮುದಾಯದ ಹಿತದೃಷ್ಟಿಯಿಂದ ಚರ್ಚೆ ನಡೆಸಿ, ಏಪ್ರಿಲ್ 12 ನೇ ತಾರೀಖು ನಿರ್ಧಾರ ಪ್ರಕಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಹಾಗೂ ಮರಾಠಾ ಸಮುದಾಯದ ಮುಖಂಡ ದಿನಕರ್ ಮೋರೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ