Kannada NewsKarnataka News

*ಬೆಳಗಾವಿ ಕೇಂದ್ರಾಡಳಿತ ಪ್ರದೇಶಕ್ಕೆ ಒತ್ತಾಯಿಸಿದ ಮರಾಠಿ ಸಾಹಿತ್ಯ ಸಮ್ಮೇಳನ*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಭಾನುವಾರ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಾಡ ವಿರೋಧಿ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ.
 ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂಬ ನಿರ್ಣಯ ಕೈಗೊಂಡು ಕನ್ನಡಿಗರನ್ನು ಕೆಣಕುವ ಕೆಲಸವನ್ನು ಸಮ್ಮೇಳನದಲ್ಲಿ ಮಾಡಲಾಗಿದೆ.
  ಬೆಳಗುಂದಿಯಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮರಾಠಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಸಾಹಿತ್ಯ ಸಮ್ಮೇಳನದ ಪ್ರಮುಖ ಚರ್ಚೆಯ ಸಂದರ್ಭದಲ್ಲಿ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥವಾಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಘೋಷಣೆ ಮಾಡಿದರು.
  ಅಲ್ಲದೇ, ಗಡಿ ಭಾಗದ ಮರಾಠಿ ಭಾಷಿಕರು ತಮ್ಮನ್ನು ಮಹಾರಾಷ್ಟçಕ್ಕೆ ಸೇರಿಸುವಂತೆ ಕಳೆದ ಹಲವಾರು ದಶಕಗಳಿಂದ ಹೋರಾಟ ಕೈಗೊಂಡಿದ್ದು, ಈ ಹೋರಾಟವನ್ನು ಮರಾಠಿ ಸಾಹಿತ್ಯ ಸಮ್ಮೇಳನ ಬೆಂಬಲಿಸುತ್ತಿದೆ. ಹಾಗಾಗಿ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಮಹಾರಾಷ್ಟ್ರ  ಸರಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು.
 ಗ್ರಂಥ ದಿಂಡಿಗೆ ಚಾಲನೆ ನೀಡುವ ಮೂಲಕ ಸಮ್ಮೇಳನಾಧ್ಯಕ್ಷರು ಉದ್ಘಾಟಿಸಿದರು. ಬಳಿಕ ಗ್ರಂಥ ದಿಂಡಿ ಗ್ರಾಮದಲ್ಲಿ ಸಂಚರಿಸಿತು. ಗ್ರಾಮಸ್ಥರು, ಮಕ್ಕಳು ಪಾಲ್ಗೊಂಡಿದ್ದರು. ಶಿವಾಜಿ ಸುಂಟ್ಕರ್ ,  ಮೋಹನ ಮೋರೆ, ವಿನಯ ಕದಂ,  ರಾಮಚಂದ್ರ ಪಾಟೀಲ ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button