Belagavi NewsBelgaum NewsKannada NewsKarnataka News
*ಮಾರ್ಕೆಟ್ ಠಾಣೆ ಪೊಲೀಸರ ಕಾರ್ಯಾಚರಣೆ: ಮಟಕಾ ಆಡುತ್ತಿದ್ದ ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮ್ಮ ಸ್ವಂತ ಲಾಭಕ್ಕಾಗಿ ಮಟಕಾ ಎಂಬ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಿಯಾಜ ಅಬ್ದುಲರೆಹಮಾನ ಘೀವಾಲೆ (46) ಹಾಗೂ ಅಶೋಕ ಬಾಬು ಜಾಧವ (58) ಎಂಬ ಇವರಿಬ್ಬರು ಆರೋಪಿಗಳು ಬೆಳಗಾವಿ ನಗರದ ಖಂಜಾರ ಗಲ್ಲಿ ಮೊಡಕಾ ಹತ್ತಿರ ಮಟಕಾ ಆಡುತ್ತಿದ್ದಾಗ
ಮಾರ್ಕೆಟ್ ಠಾಣೆಯ ಪಿಎಸ್ಐ ವಿಠಲ ಹಾವನ್ನವರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದಾರೆ.
ಇಬ್ಬರೂ ಆರೋಪಿಗಳ ವಿರುದ್ಧ ಮಾಕೇಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.35/2026 ಕಲಂ.78(111) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.



