Kannada News

ಮಗುವನ್ನು ಶಾಲೆಗೆ ಸೇರಿಸಿಕೊಳ್ಳಲು ಮಸಾಜ್ ಲಂಚ: ಶಿಕ್ಷಕ ಅಮಾನತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಗುವನ್ನು ಶಾಲೆಗೆ ಸೇರಿಸಿಕೊಳ್ಳಲು ಶಿಕ್ಷಕನೋರ್ವ ಮಗುವಿನ ತಾಯಿಯಿಂದ ಮಸಾಜ್ ಮಾಡಿಸಿಕೊಂಡ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೋದಂಡರಾಮಪುರದ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಲೋಕೇಶಪ್ಪ ಇದೀಗ ಅಮಾನತುಗೊಂಡಿದ್ದಾನೆ.

Home add -Advt

ಬ್ಯೂಟಿ ಪಾರ್ಲರ್ ನಡೆಸುವ ಮಹಿಳೆಯೊಬ್ಬರು ತಮ್ಮ ಮಗುವನ್ನು ಶಾಲೆಗೆ ಸೇರಿಸಲು ಬಂದಿದ್ದರು. ಈ ವೇಳೆ ಲೋಕೇಶಪ್ಪ ತಾಯಿಯೊಂದಿಗೆ ಮಾತನಾಡುತ್ತ ಆಕೆಯ ಉದ್ಯೋಗವನ್ನು ತಿಳಿದುಕೊಳ್ಳುತ್ತಾನೆ. ತಾನು ಬ್ಯೂಟಿ ಪಾರ್ಲರ್ ನಡೆಸುವುದಾಗಿ ಆಕೆ ತಿಳಿಸಿದಾಗ, ತನಗೂ ಮಸಾಜ್ ಮಾಡುವಂತೆ ಒತ್ತಾಯಿಸುತ್ತಾನೆ. ಆಕೆ ಒಪ್ಪದಿದ್ದಾಗ ಬಲವಂತವಾಗಿ ಒಪ್ಪಿಸುತ್ತಾನೆ. ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಉದ್ದೇಶದಿಂದ ಆಕೆ ಮಸಾಜ್ ಮಾಡಲು ಒಪ್ಪುತ್ತಾಳೆ.

ನಂತರ ಶಾಲೆಯ ಕೊಠಡಿಯೊಂದರಲ್ಲೇ ಲೋಕೇಶಪ್ಪನಿಗೆ ಮಹಿಳೆ ಮಸಾಜ್ ಮಾಡುತ್ತಾಳೆ. ಮಸಾಜ್ ಮಾಡುವ ಫೋಟೋ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಲೋಕೇಶಪ್ಪನನ್ನು ಅಮಾನತುಗೊಳಿಸಿದೆ.

ಕಗ್ಗಂಟಾದ ಮಹಾಂತ ನರೇಂದ್ರಗಿರಿ ಸಾವಿನ ಪ್ರಕರಣ; ಸಿಬಿಐಗೆ ವರ್ಗಾವಣೆ; ಮತ್ತೋರ್ವ ಆರೋಪಿ ಬಂಧನ

Related Articles

Back to top button