ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ರಾಯಣ್ಣನ ಪುತ್ಥಳಿ ಹಾಗೂ ಕನ್ನಡ ಭಾವುಟಕ್ಕೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿವೆ.
ಉಚಗಾಂವ ಗ್ರಾಮದಲ್ಲಿ ರಾಯಣ್ಣ ಪುತ್ಥಳಿ ಅಳವಡಿಸಲು ಹಾಗೂ ಕನ್ನಡ ಭಾವುಟ ಹಾರಿಸಲು ಪೋಲಿಸರು ವಿರೋಧಿಸುತ್ತಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ಕರವೇ ಶಿವರಾಮೇಗೌಡ ಬಣ ಹಾಗೂ ಕರವೇ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಅನಿಲ್ ಕುಮಾರ, ಕರವೇ ಶಿವರಾಮೇಗೌಡ ವಾಜೀದ್ ಹಿರೇಕೂಡಿ, ಅನಿಲ ದಡ್ಡಿಮನಿ ನೇತೃತ್ವದಲ್ಲಿ ಪ್ರತಿಭಟಿಸಲಾಗಿದೆ. ಎಷ್ಟೇ ಮನವಿ ಸಲ್ಲಿಸಿದರು ಉಚಗಾಂವ ಗ್ರಾಮದಲ್ಲಿ ಎರಡು ವರ್ಷದಿಂದ ಕನ್ನಡ ಭಾವಟ ಹಾರಿಸಲು ಅನುಮತಿ ಸಿಗುತ್ತಿಲ್ಲಾ. ಕನ್ನಡಪರ ಹೋರಾಟಗಾರರು ಮತ್ತು ಪೋಲಿಸ್ ಮಧ್ಯೆ ವಾಗ್ವಾದ ನಡೆದು ನಾವು ಉಚಗಾಂವಕ್ಕೆ ಹೋಗಿ ಬರುತ್ತೇವೆ ನಮ್ಮನ್ನ ಬಿಡಿ ಎಂದು ಕರವೇ ಮುಖಂಡರು ಆಗ್ರಹಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ