ರಾಮದುರ್ಗ ತಾಲೂಕಾ ನೇಕಾರರ ವೇದಿಕೆಯ ವತಿಯಿಂದ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಸುಮಾರು 300 ಕ್ಕೂ ಅಧಿಕ ನೇಕಾರರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಕಂದಾಯ ಸಚಿವ ಆರ್.ಅಶೋಕ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರಲ್ಲದೇ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಮಗ್ಗಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಲು ಅಕ್ಟೋಬರ್ 3 ರಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಕೈಕೊಂಡ ನಿರ್ಧಾರದಂತೆ ಅಕ್ಟೋಬರ್ 18 ರಂದು ಅಧಿಕೃತ ಆದೇಶ ಹೊರಡಿಸಲಾಗಿತ್ತು. ಆದರೆ ಅಕ್ಟೋಬರ್ 24 ರಂದು ಕಂದಾಯ ಇಲಾಖೆಯು ” ತಿದ್ದುಪಡಿ ಆದೇಶ” ಹೊರಡಿಸಿ ತಲಾ ಮಗ್ಗಕ್ಕೆ ಬದಲಾಗಿ ಮಗ್ಗಗಳ ಮಾಲಿಕರಿಗೆ ತಲಾ ಕುಟುಂಬಕ್ಕೆ 25 ಸಾವಿರ ರೂ.ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.
ಪ್ರವಾಹದಲ್ಲಿ ಎರಡು ಮಗ್ಗಗಳಿಂದ ಹಿಡಿದು ಐವತ್ತು ಮಗ್ಗಗಳನ್ನು ಹಾಳು ಮಾಡಿಕೊಂಡ ನೂರಾರು ಕುಟುಂಬಗಳಿವೆ.
ತಿದ್ದುಪಡಿ ಆದೇಶದ ವಿರುದ್ಧ ಇಂದು ರಾಮದುರ್ಗದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನೇಕಾರರ ಮುಖಂಡರಾದ ವಿಠ್ಠಲ ಮುರುಡಿ, ಏಕನಾಥ ಕೊಣ್ಣೂರ, ಶಂಕ್ರಪ್ಪ ಮುರುಡಿ, ಮಂಜುನಾಥ ಹೊನ್ನುಂಗರ, ಶಿವಾನಂದ ಬಳ್ಳಾರಿ, ಶ್ರೀನಿವಾಸ ಕುರುಡಗಿ, ರಾಮಚಂದ್ರ ಯಾದವಾಡ, ನಾರಾಯಣ ಬೆನ್ನೂರ, ಪ್ರಕಾಶ ಸುಳೇಭಾವಿ, ಜೀವಪ್ಪ ಕಡ್ಡಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ