*ಮಟಕಾ ಕೇಸ್: ಮಾರ್ಕೆಟ್ ಠಾಣೆ ಪೊಲೀಸ್‌ರಿಂದ 3 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಖಂಜರ ಗಲ್ಲಿಯಲ್ಲಿ ಮೋಡಕಾ ಅಂಗಡಿ ಪಕ್ಕ, ಸಾರ್ವಜನಿಕರ ಸ್ಥಳದಲ್ಲಿ ಮೇನ್ ರತನ ಮುಂಬೈ ಎಂಬ ಮಟಕಾ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಆಟ ಆಡುತ್ತಿದ್ದಾಗ ಪೊಲೀಸರ ಕೈಯಲ್ಲಿ ಮೂವರು ಲಾಕ್ ಆಗಿದ್ದಾರೆ.
ರಿಯಾಜ ಅಬ್ದುಲರಹಮಾನ ಘೀವಾಲೆ (40), ಸುಲೇಮಾನ ಬಾಬುಲ ಅತ್ತಾರ (29), ಫಹೀಮ ಜಲಾನಿ ಕೊತ್ವಾಲ ಬಂಧತಿ ಆರೋಪಿಗಳು. ಮಾರ್ಕೆಟ್ ಠಾಣೆಯ ಪಿಎಸ್ಐ ಹುಸೇನಸಾಬ ಕೆರೂರ ಹಾಗೂ ಸಿಬ್ಬಂದಿಯವರ ತಂಡ ದಾಳಿ ಮಾಡಿ, ಆರೋಪಿತರಿಂದ ಹಣ ಹಾಗೂ ಸಾಮಗ್ರಿಗಳನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 59/2026 ಕಲಂ.78(iii) ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ. ತನಿಖೆ ಮುಂದುವರೆಸಲಾಗಿದೆ.
ಮಾರ್ಕೆಟ ಠಾಣೆ ಪೊಲೀಸರಿಂದ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಬಂಧನ
ಅಬ್ದುಲಖಾದರ ಅಕ್ಷರಸಾಬ ಬೂದಿಹಾಳ (36) ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ವ್ಯಕ್ತಿಯನ್ನು ವಶಕ್ಕೆ ಪಡೆದು ಪರೀಕ್ಷೆಗರ ಒಳಪಡಿಸಿದಾವ ಆತ ಮಾದಕ ಪದಾರ್ಥ ಸೇವನೆ ಮಾಡಿರುವು ದೃಢವಾಗಿದೆ.

ಆರೋಪಿ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 60/2026 ಕಲಂ.27(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.
ಮೇಲಿನ ಪ್ರಕರಣದಲ್ಲಿ ಆರೋಪಿತರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ ಪಿಎಸ್‌ಐ, ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

