೧. ಶಹಾಪೂರ ಪೊಲೀಸ್‌ರಿಂದ ಮಟಕಾ ದಾಳಿ; ಇಬ್ಬರ ಬಂಧನ
ದಿನಾಂಕ: ೨೧/೦೩/೨೦೨೪ ರಂದು ಬೆಳಗಾವಿ ನಗರದ ವಡಗಾಂವ ತೆಗ್ಗಿನ ಗಲ್ಲಿಯಲ್ಲಿ ಮಟಕಾ ಆಟ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಶಹಾಪೂರ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ, ಆರೋಪಿತರಾದ, ೧] ರಾಜಶೇಖರ ವಸಂತ ದವಳಿ ಸಾ: ಮಲಪ್ರಭಾ ನಗರ, ವಡಗಾಂವ ಬೆಳಗಾವಿ ೨) ಅಮತ ಅನಂತ ಉಂಡಾಳೆ ಸಾ|| ಖಾಸಬಾಗ, ಬೆಳಗಾವಿ ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ. ೨೩೨೦/- ರೂ ಹಣ ಜಪ್ತಪಡಸಿಕೊಂಡು ಅವರಿಂದ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.
೨. ತಿಲಕವಾಡಿ ಪೊಲೀಸ್‌ರಿಂದ ಹೆರಾಯಿನ್ (ಮಾದಕ ವಸ್ತು) ಮಾರಾಟಗಾರರ ಬಂಧನ;
ದಿನಾಂಕ: ೨೧/೦೩/೨೦೨೪ ರಂದು ಬೆಳಗಾವಿ ನಗರದ ವಾಕ್ಸಿನ್ ಡಿಪೋ ಹತ್ತರ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ತಿಲಕವಾಡಿ ಮತ್ತು ಅವರ ಸಿಬ್ಬಂದಿಯವರ ತಂಡ ದಾಳಿ ಮಾಡಿ
೧) ದಾದಾಪೀರ ಸುಬಾನಿ ಪೀರಜಾದೆ ಸಾ|| ವೀರಭದ್ರ ನಗರ, ಬೆಳಗಾವಿ
೨) ತೌಫಿಕ ಸಾ|| ವೀರಭದ್ರ ನಗರ, ಬೆಳಗಾವಿ
೩) ಜಾಹೀದ ಸಾ|| ರುಕ್ಮಿಣಿ ನಗರ, ಬೆಳಗಾವಿ
ಇವರನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ, ೧.೧೬೦ ಗ್ರಾಂ ಅಂದಾಜು ಬೆಲೆ ರೂ. ೬೦೦೦/- ಹೆರಯಿನ್ ಎಂಬ ಮಾದಕ ವಸ್ತು ಹಾಗೂ ಹಣ ೫೦೦/- ರೂ. ಹೀಗೆ ಒಟ್ಟು ರೂ. ೬೫೦೦/- ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.
೩. ಮಾರ್ಕೆಟ ಪೊಲೀಸ್‌ರಿಂದ ಅಕ್ರಮ ಸರಾಯಿ ಮಾರಾಟಗಾರನ ಬಂಧನ;
ದಿನಾಂಕ: ೨೧/೦೩/೨೦೨೪ ರಂದು ಬೆಳಗಾವಿ ನಗರದ ಹದ್ದಿಯ ಮಹಾದ್ವಾರ ರೋಡ ಹಳೆ ಪಿಬಿ ರಸ್ತೆ ಹತ್ತಿರ, ಬೆಂಗಾಲಿ ಸವೀಟ ಮಾರ್ಟ ಎಂಬ ಅಂಗಡಿಯ ಪಕ್ಕದ ಬೋಳ ಜಾಗೆಯಲ್ಲಿ ಗೋವಾ ರಾಜ್ಯದ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಮಾರ್ಕೆಟ ಮತ್ತು ಅವರ ಸಿಬ್ಬಂದಿಯವರ ತಂಡ ದಾಳಿ ಮಾಡಿ
೧) ಸುಭಾಷ ಸುಧೀರ ಡೇ (೪೩) ಸಾ|| ಮಹಾದ್ವಾರ ರಸ್ತೆ, ಬೆಳಗಾವಿ
ಇವನನ್ನು ವಶಕ್ಕೆ ಪಡೆದುಕೊಂಡು ಅವನ ಬಳಿ ಇದ್ದ, ವಿವಿಧ ಕಂಪನಿಯ ಗೋವಾ ರಾಜ್ಯದ ಸುಮಾರು ೧೦೨ ಲೀಟರ್ ಅಂದಾಜು ಬೆಲೆ ರೂ. ೧೦೦೫೦೦/- ಬೆಲೆಯ ಅಕ್ರಮ ಸರಾಯಿ ಬಾಟಲಿಗಳನ್ನು ಜಪ್ತಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
೪. ಮಾಳಮಾರುತಿ ಪೊಲೀಸ್‌ರಿಂದ ಅಕ್ರಮ ಸರಾಯಿ ಮಾರಾಟಗಾರನ ಬಂಧನ;
ದಿನಾಂಕ: ೨೨/೦೩/೨೦೨೪ ರಂದು ಬೆಳಗಾವಿ ನಗರದ ಹದ್ದಿಯ ಗ್ಯಾಂಗವಾಡಿಯಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಮಾಳಮಾರುತಿ ಮತ್ತು ಅವರ ಸಿಬ್ಬಂದಿಯವರ ತಂಡ ದಾಳಿ ಮಾಡಿ
೧) ಕಲ್ಪನಾ ರಾಜೇಶ ಲೋಂಡೆ ಸಾ|| ಗ್ಯಾಂಗವಾಡಿ, ಬೆಳಗಾವಿ
೨) ನಿಖಿತಾ ಶುಭಂ ಲೋಂಡೆ ಸಾ|| ಗ್ಯಾಂಗವಾಡಿ, ಬೆಳಗಾವಿ
ಇವರನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ, ೧೫ ಲೀಟರ್‌ಗಳ ೦೨ ಟ್ಯೂಬ್ ಸುಮಾರು ೩೦ ಲೀಟರ್‌ಗಳಷ್ಟು ಅಂದಾಜು ಬೆಲೆ ರೂ. ೧೫೦೦/- ಬೆಲೆಯ ಕಳ್ಳಭಟ್ಟಿ ಸರಾಯಿ ಬಾಟಲಿಗಳನ್ನು ಜಪ್ತಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
೫. ಕಾಕತಿ ಪೊಲೀಸ್ ರಿಂದ ಮಟಕಾ ಆಡುತ್ತಿದ್ದವನ ಬಂಧನ –
ದಿನಾಂಕ: ೨/೦೩/೨೦೨೪ ರಂದು ಮನ್ನೂರ ಗ್ರಾಮ ಜನತಾ ಪ್ಲಾಟ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಆಟ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಕತಿ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ, ಆರೋಪಿತ
೧] ನಿಂಗಪ್ಪ ಸಿದ್ದಪ್ಪ ನಾಯಿಕ ಸಾ|| ಜನತಾ ಪ್ಲಾಟ್, ಮನ್ನೂರ, ಬೆಳಗಾವಿ
೨) ನಾಗರಾಜ @ ನಾಗಪ್ಪ ಮುಚ್ಛಂಡಿ ಸಾ|| ಸೋನಟ್ಟಿ, ಬೆಳಗಾವಿ
ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ನಗದು ೧೦೨೦೦/- ಒಂದು ಮೋಬೈಲ್ ಅಕಿ ೪೦೦೦/- ಹೀಗೆ ಒಟ್ಟು ರೂ. ೧೪೨೦೦/- ರೂ ಹಣ ಜಪ್ತಪಡಸಿಕೊಂಡು ಅವನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ