GIT add 2024-1
Laxmi Tai add
Beereshwara 33

ಮಾತೆ ಮಹಾದೇವಿ ಸ್ಮರಣೋತ್ಸವ; ಪ್ರಶಸ್ತಿ ಪ್ರದಾನ

Anvekar 3
Cancer Hospital 2

ಬೆಂಗಳೂರಿನಲ್ಲಿ ದಿನಾಂಕ 24-03-2024 ರಂದು ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಸ್ಮರಣೋತ್ಸವ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಹಾಗೂ ವಿಶ್ವ ಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಯಿಂದ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಪರಮಪೂಜ್ಯ ಮಾತೆ ಮಹಾದೇವಿಯವರ 78ನೇ ಜಯಂತಿ, 5ನೇ ಲಿಂಗೈಕ್ಯ ಸಂಸ್ಮರಣೆ ಹಾಗೂ ವಿಶ್ವದ ದ್ವಿತೀಯ ಮಹಿಳಾ ಜಗದ್ಗುರು ಮಾತೆ ಗಂಗಾದೇವಿಯವರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಪರಮಪೂಜ್ಯ ಮಾತೆ ಗಂಗಾದೇವಿಯವರು, ಹುಕ್ಕೇರಿಯ ಬಸವಬೆಳವಿಯ ಚರಂತೇಶ್ವರ ವಿರಕ್ತಮಠದ ಪೂಜ್ಯ ಶರಣ ಬಸವದೇವರು ಸಾನಿಧ್ಯ ವಹಿಸುವರು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶರಣೆ. ನಾಗಲಕ್ಷ್ಮೀ ಚೌಧರಿಯವರು ಕಾರ್ಯಕ್ರಮದ ಉದ್ಘಾಟಿಸಲಿದ್ದು, ಬಸವ ಧ್ವಜಾರೋಹಣವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ.ಸೋಮಶೇಖರ ನೆರವೇರಿಸುವರು. ಅಧ್ಯಕ್ಷತೆಯನ್ನು ಬಸವ ಸಮಿತಿಯ ಅಧ್ಯಕ್ಷರಾದ ಶರಣ. ಅರವಿಂದ ಜತ್ತಿ ವಹಿಸುವರು. ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣ ಚಂದ್ರಮೌಳಿ ಎನ್. ಲಿಂಗಾಯತ, ಬೀದರ್ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶರಣ ರಾಜೇಂದ್ರಕುಮಾರ ಗಂದಗೆ, ಸೋಮಶೇಖರ ಪಾಟೀಲ ಗಾದಗಿ ಬೀದರ್, ಹಿರಿಯ ನ್ಯಾಯವಾದಿಗಳಾದ ಅನಂತ ನಾಯಕ್, ವಿಶ್ವ ಬಂಧು ಬಸವ ಸಮಿತಿಯ ಅಧ್ಯಕ್ಷರಾದ ಅಮರೇಶ ಮಿಣಜಗಿ ಮತ್ತು ಕುಮಾರಸ್ವಾಮಿ ಹೆಚ್. ಮುಖ್ಯ ಅತಿಥಿಗಳಾಗಿ ಆಗಮಿಸುವರು.

ರಾಜ್ಯ ಪ್ರಶಸ್ತಿ ಪ್ರದಾನ-2024 : ಶರಣ ದಾಸೋಹ ರತ್ನ ಪ್ರಶಸ್ತಿಯನ್ನು ಬೆಂಗಳೂರಿನ ಶರಣ ದಂಪತಿಗಳಾದ ಎನ್.ಟಿ. ಸಿದ್ದರಾಮಣ್ಣನವರ್ ಮತ್ತು ಎಸ್.ಎನ್. ಶಾರದಾ ಅವರಿಗೆ ನೀಡಲಾಗುವುದು.
ಶರಣ ಕಾಯಕ ರತ್ನ ಪ್ರಶಸ್ತಿಯನ್ನು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶರಣ. ಸಿ.ಎಸ್. ದ್ವಾರಕಾನಾಥ್ ಅವರಿಗೆ ನೀಡಲಾಗುವುದು.
ಶರಣ ಸೇವಾ ರತ್ನ ಪ್ರಶಸ್ತಿಯನ್ನು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶರಣ. ಬಿ.ಎಸ್.ಪರಮಶಿವಯ್ಯನವರಿಗೆ ನೀಡಲಾಗುತ್ತಿದೆ.

Emergency Service

ವಿದ್ಯಾ ರತ್ನ ಪ್ರಶಸ್ತಿ ಪ್ರದಾನ-2024 : ಬಸವಾತ್ಮಜೆ ವಿದ್ಯಾ ರತ್ನ ಪ್ರಶಸ್ತಿಯನ್ನು ಕುಮಾರ ಸಮ್ಯಕ್ ಜಿ.ಎಲ್. (98.24% 10ನೇ ತರಗತಿ-2023), ಕುಮಾರ ದಕ್ಷ ಜಿ.ಕೆ. (97.4% 10ನೇ ತರಗತಿ-2023) ಮತ್ತು ಕುಮಾರಿ ದಿಯಾ ಜಿ.ಕೆ. (96.2% 10ನೇ ತರಗತಿ-2023) ನೀಡಲಾಗುವುದು.

ವಚನ ಗಾಯನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ: ಕೊಪ್ಪಳದ ಖ್ಯಾತ ಸಂಗೀತಗಾರರಾದ ಶರಣೆ ವಿಜಯಲಕ್ಷ್ಮೀ ಈಶ್ವರ ಲಿಂಗಾಯತ ವಚನ ಗಾಯನ ನಡೆಸಿಕೊಡುವರು. ವಚನ ಮತ್ತು ನೃತ್ಯ ರೂಪಕಗಳನ್ನು ಬೆಂಗಳೂರಿನ ಚೈತ್ರಾ ಲಕ್ಷ್ಮೀ ನಾರಾಯಣ ಅವರ ಮಾರ್ಗದರ್ಶನದಲ್ಲಿ “ನಿನರ್ತಿಶಾ ಡ್ಯಾನ್ಸ್ ಅಕಾಡೆಮಿ ನಡೆಸಿಕೊಡುವರು.
ಬೆಳಗಿನ ತಿಂಡಿ ಪ್ರಸಾದ ಮತ್ತು ಮಧ್ಯಾಹ್ನದ ಊಟ ಪ್ರಸಾದ ವ್ಯವಸ್ಥೆಗಳಿದ್ದು, ಜಾತಿ, ಮತ, ಪಂಥಗಳ ಭೇದವಿಲ್ಲದೆ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲು ಕೋರಲಾಗಿದೆ.

-ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿ
ಉಪಾಧ್ಯಕ್ಷರು, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ,
ಬಸವ ಗಂಗೋತ್ರಿ ಆಶ್ರಮ, ಕುಂಬಳಗೋಡು ಬೆಂಗಳೂರು

Bottom Add3
Bottom Ad 2