ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪೌರಕಾರ್ಮಿಕರು ಸ್ವಂತ ಕಟ್ಟಡ ಹೊಂದಬೇಕೆನ್ನುವ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಈ ಬಾರಿ ಕೇವಲ 15 ಪೌರಕಾರ್ಮಿಕರಿಗೆ ಕಟ್ಟಡ ನಿಡಿದ್ದೇವೆ, ಮುಂದಿನ ದಿನಗಳಲ್ಲಿ ಎಲ್ಲ ಪೌರಕಾರ್ಮಿಕರಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರ ನಗರದ ಅಡಿಬಟ್ಟಿ ಕಾಲೋನಿಯಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಜಿ+2ಮಾದರಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಹಲಿಗೆ ಹೋಗಿದ್ದು ಮಹದಾಯಿ ವಿಷಯ ಚರ್ಚಿಸಲು. ನಾನು ಸಚಿವನಾದ ಮೇಲೆ ಹೈಕಮಾಂಡ್ ನಾಯಕರ ಭೇಟಿ ಆಗಿರಲಿಲ್ಲ, ಅವರಿಗೆ ಧನ್ಯವಾದ ತಿಳಿಸಲು ಹೋಗಿದ್ದೆ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಲು ದೇವೆಂದ್ರ ಫಡ್ನವೀಸ್ ಪಾತ್ರ ಪ್ರಮುಖ. ಹೀಗಾಗಿ ದೆಹಲಿಯಿಂದ ವಾಪಾಸ್ಸಾಗುವಾಗ ಮುಂಬೈನಲ್ಲಿ ಫಡ್ನವೀಸ್ ಭೇಟಿ ಮಾಡಿರುವುದಾಗಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಚಿವ ಸ್ಥಾನ ಆಕಾಂಕ್ಷಿಯಾದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿ ಹಾಗೂ ಉಮೇಶ ಕತ್ತಿ ನನ್ನ ಹಳೆಯ ಗೆಳೆಯ, ಅವರಿಗೆ ಸಚಿವ ಸ್ಥಾನ ಸಿಕ್ಕರೆ ಖುಷಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ಬಸವರಾಜ ಆರೇನ್ನವರ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಜಯಾನಂದ ಹುಣಶ್ಯಾಳ, ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ತಾಪಂ ಸದಸ್ಯ ಕಿರಣ ಬೆಣಚಿನಮರಡಿ, ಜ್ಯೋತಿಭಾ ಸುಬಂಜಿ, ಲಕ್ಷ್ಮಣ ಖಡಕಬಾಂವಿ, ಬಸವರಾಜ ಹಿರೇಮಠ, ಶಿವಾನಂದ ಚೌಕಾಶಿ, ಯಲ್ಲಪ್ಪ ಹಳ್ಳೂರ, ಮುತ್ತುರಾಜ ಜಮಖಂಡಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಅಧಿಕಾರಿಗಳಾದ ವಿ ಎಮ್ ಸಾಲಿಮಠ, ವಿನೋದ ಪಾಟೀಲ, ಹಳ್ಳೂರ, ಗುತ್ತಿಗೇದಾರ ಬಸವರಾಜ ಗಂಗರೆಡ್ಡಿ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ