Kannada NewsLatest

ವನಮಹೋತ್ಸವ ಕಾರ್ಯಕ್ರಮ

ವನಮಹೋತ್ಸವ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ -ಹಳಿಯಾಳ –

ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆವರಣದಲ್ಲಿ  ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಯಾಪ್ ಸಂಸ್ಥೆಯ ಅಧ್ಯಕ್ಷ  ಪ್ರಭುದೇವ ಪಟ್ಟಣಶೆಟ್ಟಿ  ಆಗಮಿಸಿದ್ದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್‌  ಪಿ ಎಸ್ ಸಾವಕಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಾ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರುಗಳಾದ  ರಾಮ ಭಂಡಾರೆ,  ಎಸ್ ವಿ ಗಣಾಚಾರಿ,  ಪ್ರಶಾಂತ ಕುಲಕರ್ಣಿ ಮತ್ತು ವಿವೇಕ ಕುಲಕರ್ಣಿ  ವೇದಿಕೆಯ ಮೇಲೆ ಉಪಸ್ಥಿತರಿದ್ದರು.  Forest Festival

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ ವಿ ಕಟ್ಟಿ, ಕೆ ಎಲ್ ಎಸ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಮೀರ ಗಲಗಲಿ, ಎನ್ ಎಸ್ ಎಸ್ ಘಟಕದ ಸಂಚಾಲಕ ಪ್ರೊ. ವಿ ಎಮ್ ಚೌಗುಲಾ, ಗ್ರಂಥಪಾಲಕ ಸುನೀಲ ಯರಗಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ  ಜಿ ಎಸ್ ಯಳ್ಳೂರ  ಉಪಸ್ಥಿತರಿದ್ದರು.

Home add -Advt

ರಕ್ತ ಚಂದನ, ಸೀತಾ ಫಲ, ನೆಲ್ಲಿ, ಸಂಪಿಗೆ, ನೇರಳೆ, ಗೇರು, ಜಂಬೂ ನೇರಳೆ ಮುಂತಾದ 100ಕ್ಕೂ ಹೆಚ್ಚು ಸಸಿಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು. ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ  ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊ. ವಿಜೇತ ಸ್ವಾದಿ ನಿರೂಪಿಸಿದರು.

ಮಹಾವಿದ್ಯಾಲಯದಿಂದ ಪ್ರತಿ ವರ್ಷ ತೇರ್ಗಡೆ ಹೊಂದುವ ಎಲ್ಲ ವಿದ್ಯಾರ್ಥಿಗಳೂ ಒಂದೊಂದು ಗಿಡ ನೆಡುವ ಕ್ರಮವು ರೂಢಿಯಲ್ಲಿದೆ ಹಾಗೂ 300ಕ್ಕೂ ಹೆಚ್ಚು ಗಿಡಗಳನ್ನು ಈ ವರ್ಷ ಮಹಾವಿದ್ಯಾಲಯದ ಆವರಣದಲ್ಲಿ ನೆಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.////

Related Articles

Back to top button