
ಪ್ರಗತಿವಾಹಿನಿ ಸುದ್ದಿ, ಧಾರವಾಡ – ಶ್ರೀ ಶಿರಡಿ ಸಂಸ್ಥೆ ಹಾಗೂ ಗೆಳೆಯರ ಬಳಗ ಧಾರವಾಡ ಇವರ ವತಿಯಿಂದ ಪ್ರತಿನಿತ್ಯ ಕೊರೋನಾ ಕರ್ತವ್ಯದಲ್ಲಿರುವ 500 ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರವ್ಯಾಪಿ ಲಾಕ್ ಡೌನ್ ಪ್ರಯುಕ್ತ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡದ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಮಾರ್ಚ್ 19ರಿಂದ ಈ ವ್ಯವಸ್ಥೆ ಆರಂಭವಾಗಿದ್ದು ಲಾಕ್ ಡೌನ್ ಮುಗಿಯುವವರೆಗೂ ಮುಂದುವರಿಯಲಿದೆ.
ಮಹೇಶ್ ಶೆಟ್ಟಿ , ಮಂಜುನಾಥ್ ಹರಲಾಪುರ್, ಮಂಗಳ ಪಟೇಲ್, ಸಂಜಯ್ ಮಿಶ್ರಾ, ಉದಯ್ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಹರಪನಹಳ್ಳಿ, ಕಿರಣ್ ಶಾ, ಸಂತೋಷ್ ಮಿಕ್ಕಲಿ, ಹಾಗೂ ಸಾಯಿ ಸೇವಕರು ಎಲ್ಲರೂ ಕೂಡಿಕೊಂಡು ಈ ಕಾರ್ಯವನ್ನು ಕೈಗೊಂಡಿದ್ದಾರೆ.