
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಹಿರಿಯ ಪತ್ರಿಕಾ ಛಾಯಾಗ್ರಾಹಕ ಚೇತನ ಕುಲಕರ್ಣಿ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು.
ಕಳೆದ ಮೂರು ದಶಕಗಳಿಂದ ಬೆಳಗಾವಿ ಪತ್ರಿಕೋದ್ಯಮಕ್ಕೆ ಸೇವೆ ನೀಡಿದ್ದ ಚೇತನ ಕುಲಕರ್ಣಿ ಕನ್ನಡಪ್ರಭ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸಪ್ರೆಸ್, ಪ್ರಜಾವಾಣಿ, ತರುಣಭಾರತ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ದುಡಿದಿದ್ದರು.
ಕಪ್ಪು -ಬಿಳುಪು ಛಾಯಾಚಿತ್ರಗಳ ಕಾಲದಿಂದ ಇತ್ತೀಚಿನ ಡಿಜಿಟಲ್ ಫೊಟೋಗ್ರಾಫಿವರೆಗೆ ಎಲ್ಲದರಲ್ಲೂ ಪರಿಣಿತ ಪಡೆದಿದ್ದ ಚೇತನ & ಕುಟುಂಬ ಕ್ಯಾಮೆರಾದೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ಚೇತನ ಕುಲಕರ್ಣಿ ತಂದೆ ಬಾಲಿವುಡ್ ಚಿತ್ರೋದ್ಯಮದೊಂದಿಗೆ ಕ್ಯಾಮೆರಾಮೆನ್ ಆಗಿ ನಂಟು ಹೊಂದಿದ್ದರು.
ಕಾನೂನು ಮತ್ತು ಸುವ್ಯವಸ್ಥೆಯ ಅನೇಕ ಕಠಿಣ ಹಾಗೂ ಅತಿರೇಕದ ಪರಿಸ್ಥಿತಿಗಳಲ್ಲೂ ಧೈರ್ಯದಿಂದ ಮುನ್ನುಗ್ಗಿ ಛಾಯಾಚಿತ್ರ ಕ್ಲಿಕ್ಕಿಸಿ, ಅಂದಿನ ರೀಲ್ ಫೊಟೊಗ್ರಾಫಿ ಸಹ ಅರ್ಧಗಂಟೆಯಲ್ಲಿ ಪತ್ರಿಕೆಗಳಿಗೆ ಚೇತನ ತಲುಪಿಸುತ್ತಿದ್ದರು. ವೃತ್ತಿಪರತೆ ಮತ್ತು ಬದ್ಧತೆಯ ಛಾಯಾಗ್ರಾಹಕ ಇಂದು ಅಗಲಿದ್ದು ಅವರ ಕುಟುಂಬ ಮತ್ತು ಮಾಧ್ಯಮಲೋಕಕ್ಕೆ ದುಖಃ ಉಂಟು ಮಾಡಿದೆ.
ಚೇತನ ತಾಯಿ, ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಾಜೀನಾಮೆ ಸುಳಿವು ನೀಡಿದ ಸಿಎಂ ಯಡಿಯೂರಪ್ಪ