Karnataka NewsLatest

ಮೆಗಾ ಲಸಿಕಾಮೇಳ: ದೇಶಕ್ಕೇ ಬೆಳಗಾವಿಗೆ ದ್ವಿತೀಯ ಸ್ಥಾನ

ಒಂದೇ ದಿನದಲ್ಲಿ 2,57,604 ಲಸಿಕೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇಶದಲ್ಲಿ ಸೆ.17 ರಂದು ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸೆ.17 ರಂದು‌‌ ಒಂದೇ ದಿನದಲ್ಲಿ 2,57,604 ಲಸಿಕೆ ನೀಡುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ.

ಇದು ಪ್ರಾಥಮಿಕ ಮಾಹಿತಿ

ಬೆಳಗಾವಿ ಜಿಲ್ಲೆಯು ಮೂರು‌ ಲಕ್ಷ ಲಸಿಕೆಯ ಗುರಿಯನ್ನು ಹೊಂದಿತ್ತು. ನಿರೀಕ್ಷಿತ ಗುರಿಸಾಧನೆಯಾಗದಿದ್ದರೂ ಒಟ್ಟಾರೆ ಲಸಿಕೆ ಪ್ರಮಾಣದಲ್ಲಿ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಲಸಿಕೆ ನೀಡುವುದರಲ್ಲಿ ದ್ವಿತೀಯ ಸ್ಥಾನ‌ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ..

Home add -Advt
ಇದು ಪ್ರಾಥಮಿಕ ಮಾಹಿತಿ

ಈ ಸಾಧನೆಗೆ ಶ್ರಮಿಸಿದ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೆಗಾ ಲಸಿಕಾಮೇಳ ದ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಜನಪ್ರತಿನಿಧಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಷೇರು ವ್ಯವಹಾರ -ತಾಳ್ಮೆಯೇ ಬಂಡವಾಳ

Related Articles

Back to top button