
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಚವ್ಹಾಟ ಗಲ್ಲಿಯಲ್ಲಿ ನಡೆದ ಹೋಳಿ ಸಂಭ್ರಮದಲ್ಲಿ ಎಂಇಎಸ್ ಕಾರ್ಯಕರ್ತರು ಮಹಾರಾಷ್ಟ್ರ ನಾಡಗೀತೆಗೆ ನೃತ್ಯ ಮಾಡಿದ್ದಾರೆ. ಈ ಬಗ್ಗೆ ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನೀಡಿದ ದೂರಿನ ಅನ್ವಯ ಗೋಜಗಾ ಗ್ರಾಮದ ವೈಭವ ಗಾವಡೆ, ಆಯೋಜಕ ಸುನಿಲ್ ಜಾಧವ್ ಹಾಗೂ ಡಿಜೆ ಆಪರೇಟರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಚವ್ಹಾಟ ಗಲ್ಲಿಯ ನಾನಾಪಾಟೀಲ ಚೌಕ್ ಬಳಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಕೊಡುವ ಉದ್ದೇಶದಿಂದ ರಸ್ತೆಯ ಮೇಲೆ ಡಿಜೆ ಡಾಲ್ಟಿಗಳನ್ನು ನಿಲ್ಲಿಸಿ ಕಾರ್ಯಕರ್ತರು ಕರ್ಕಶ ಶಬ್ದ ಮಾಡುತ್ತಿದ್ದರು. ಈ ವೇಳೆ ಜೈ ಜೈ ಮಹಾರಾಷ್ಟ್ರ ಎಂಬ ಮರಾಠಿ ಹಾಡಿಗೆ ಯುವಕರು ಕುಣಿಯುತ್ತಿದ್ದರು. ಈ ವೇಳೆ ಗಲಾಟೆ ನಡೆದಿದೆ. ಹೀಗಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.