
ಪ್ರಗತಿವಾಹಿನಿ ಸುದ್ದಿ: ಭಾಷಾ ಧ್ವೇಷದ ವಿಷಬೀಜ ಬಿತ್ತಿ, ಕನ್ನಡಿಗರು, ಮರಾಠಿಗರ ಮಧ್ಯೆ ವೈಷಮ್ಯ ಮೂಡಿಸುತ್ತಿದ್ದ ಆರೋಪದಲ್ಲಿ ಬೆಳಗಾವಿ ಪೊಲೀಸರು ಎಂಇಎಸ್ ಮುಖಂಡ ಶುಭಂ ಶಳಕೆಯನ್ನು ಬಂಧಿಸಿದ್ದಾರೆ.
ಶುಭಂ ಶಳಕೆ ವಿರುದ್ಧ ಬೆಳಗಾವಿ ಖಡೇ ಬಜಾರ್, ಕ್ಯಾಂಪ್, ಮಾರ್ಕೆಟ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಇತ್ತೀಚೆಗೆ ಉದ್ಯಮಿಯೊಬ್ಬರ ಕಾರ್ಖಾನೆ, ಕಚೇರಿ ನಾಮಫಲಕದ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದ.
ಬೆಳಗಾವಿಯಲ್ಲಿ ಭಾಷಾಧ್ವೇಷಕ್ಕೆ ಕಾರಣನಾಗುತ್ತಿದ್ದ ಹಿನ್ನೆಲೆಯಲ್ಲಿ ಶುಭಂ ಶಳಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ