ಕನ್ನಡಿಗರಿಗೆ ಎಂಇಎಸ್ ಪುಂಡರ ಟೊಳ್ಳು ಬೆದರಿಕೆ; ಇದಕ್ಕೆಲ್ಲ ಕನ್ನಡಿಗರು ಜಗ್ಗಲ್ಲ, ಬಗ್ಗಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಇನ್ನೆರಡು ದಿನದಲ್ಲಿ ತೆರವುಗೊಳಿಸದಿದ್ದಲ್ಲ ಎಂಇಎಸ್ ಧ್ವಜ ಹಾರಿಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಟೊಳ್ಳು ಬೆದರಿಕೆ ಹಾಕಿದ್ದಾರೆ.
ಕನ್ನಡ ನೆಲದ ಅನ್ನ, ನೀರು, ಗಾಳಿ ಸೇವಿಸುತ್ತ ಕನ್ನಡಿಗರ ಋಣದಲ್ಲಿರುವ ಎಂಇಎಸ್ ಪುಂಡರು ಕನ್ನಡಿಗರಿಗೇ ಬೆದರಿಕೆ ಹಾಕುವ ದಾರ್ಷ್ಟ್ಯ ತೋರಿಸುತ್ತಿದ್ದಾರೆ.
ಕನ್ನಡ ಹೋರಾಟಗಾರರು ನಿನ್ನ ಧ್ವಜ ಹಾರಿಸಿದ್ದಲ್ಲದೆ, ರಾತ್ರಿಯಿಡೀ ಅಲ್ಲೇ ಮಲಗಿ ಧ್ವಜಕ್ಕೆ ಧಕ್ಕೆಯಾಗದಂತೆ ಕಾದಿದ್ದಾರೆ. ಕನ್ನಡ ನಾಡಿನಲ್ಲೇ ಕನ್ನಡ ಧ್ವಜ ಕಾಯಬೇಕಾದ ಪರಿಸ್ಥಿತಿ ಬಂದಿರುವುದು ದುರ್ಧೈವದ ಸಂಗತಿಯೇ ಸರಿ.
ಬೆಳಗಾವಿ ಮಹಾನಗರ ಪಾಲಿಕೆ ಈ ಹಿಂದೆ ಹಳೆಯ ಕಟ್ಟದಲ್ಲಿದ್ದಾಗ ಅದರ ಮೇಲೆ ಎಂಇಎಸ್ ತಮ್ಮದೆಂದು ಹೇಳಿಕೊಳ್ಳುವ ಭಗವಾಧ್ವಜ ಇತ್ತು. ನಂತರ ಪಾಲಿಕೆ ಹೊಸ ಕಟ್ಟಡಕ್ಕೆ ಬಂದ ನಂತರ ಆ ಧ್ವಜಕ್ಕೆ ಅವಕಾಶ ನೀಡಲಾಗಿಲ್ಲ. ಆಗಿನ ಸಂಸದ ಸುರೇಶ ಅಂಗಡಿ ಪಾಲಿಕೆಯ ಹೊಸ ಕಟ್ಟಡದ ಮೇಲೂ ಭಗವಾಧ್ವಜ ಹಾರಿಸಬೇಕೆಂದು ಹೋರಾಟ ನಡೆಸಿದ್ದರು. ನಂತರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಹಿಂದೆ ಸರಿದಿದ್ದರು.
ಈಗ ಇರುವ ಕನ್ನಡ ಧ್ವಜವನ್ನು ಅಧಿಕೃತಗೊಳಿಸಬೇಕು, ಯಾವುದೇ ಕಾರಣಕ್ಕೂ ಎಂಇಎಸ್ ಧ್ವಜ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು. ಎಂಇಎಸ್ ಪುಂಟಡ ಪುಂಡಾಟಿಕೆಗೆ ಈಗಲೇ ಕಡಿವಾಣ ಹಾಕಬೇಕು.
ನಿನ್ನೆಯ ಸುದ್ದಿ – ಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ