ಪ್ರಗತಿ ವಾಹಿನಿ ಸುದ್ದಿ ಮುಂಬೈ –
೧೯ ವರ್ಷದ ಯುವ ಕ್ರಿಕೇಟಿಗ, ಮುಂಬೈ ಇಂಡಿಯನ್ಸ್‌ನ ಆಟಗಾರ ತಿಲಕ್ ವರ್ಮಾ ಐಪಿಎಲ್ ನಲ್ಲಿ ಬರುವ ಹಣದಲ್ಲಿ ಸ್ವಂತ ಮನೆ ಕೊಂಡುಕೊಳ್ಳುವ ಕನಸು ಹೊತ್ತಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಅನಿಸಿಕೆ ಹಂಚಿಕೊಂಡಿರುವ ಅವರು, ತನ್ನ ಕುಟುಂಬಕ್ಕೆ ಸ್ವಂತ ಮನೆಯಿಲ್ಲ, ಐಪಿಎಲ್‌ನಿಂದ ಬರುವ ಹಣದಲ್ಲಿ ಸ್ವಂತ ಮನೆಯ ಕನಸು ಸಾಕರಗೊಳ್ಳಲಿದೆ ಎಂದು ಸಂತಸಪಟ್ಟಿದ್ದಾರೆ.
ತಿಲಕ್ ವರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಪ್ರಸಕ್ತ ಐಪಿಎಲ್‌ನಲ್ಲಿ ೧.೭೦ ಕೋಟಿ ರೂ. ನೀಡಿ ಖರೀದಿ ಮಾಡಿದೆ. ಎರಡು ಪಂದ್ಯಗಳಲ್ಲಿ ಅವರು ೨೨ ಮತ್ತು ೬೧ ರನ್ ಗಳಿಸಿದ್ದಾರೆ. ಅಲ್ಲದೇ ೧೭೩ ರನ್ ಸರಾಸರಿ (ಸ್ಟ್ರೈಕ್ ರೇಟ್) ಅವರ ಸ್ಪೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದ್ದು ಕ್ರಿಕೇಟ್ ಪ್ರಿಯರ ಗಮನ ಸೆಳೆದಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ; ಪೊಲೀಸ್ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ