
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ.
ಅಂಬಡಗಟ್ಟಿ ಗ್ರಾಮದ ಮೇಟಿ ಅವರ ಮನೆಯ ಹಿತ್ತಲಿನಲ್ಲಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ. ನಾಯಿ, ಹಂದಿ ದಾಳಿಗೆ ಕೂಸು ಬಲಿಯಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
					 
				 
					 
					 
					 
					
 
					 
					 
					


