
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕರ್ನಾಟಕದಲ್ಲಿ ‘ಪುಷ್ಪ-2’ ಸಿನಿಮಾದ ಮಧ್ಯರಾತ್ರಿ ಹಾಗೂ ಬೆಳಗಿನ ಪ್ರದರ್ಶನ ರದ್ದು ಮಾಡಲಾಗಿದೆ.
ಬೆಂಗಳೂರಿನ 42 ಚಿತ್ರಮಂದಿರಗಳಲ್ಲಿ ರಾತ್ರಿಯಿಡೀ ಸಿನೇಮಾ ಪ್ರದರ್ಶನ ನಡೆಸುತ್ತಿರುವ ಕುರಿತು ಬುಕ್ ಮೈ ಶೋ ಮೂಲಕ ಪತ್ತೆ ಮಾಡಿದ ಪೊಲೀಸರು ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು. ಅದರಂತೆ, ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗೆ 3 ಗಂಟೆ ಶೋ ಸೇರಿದಂತೆ ಹಲವು ಪ್ರದರ್ಶನ ಕ್ಯಾನ್ಸಲ್ ಮಾಡಲಾಗಿದೆ.
ಪುಷ್ಪ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜಿಲ್ಲಾಧಿಕಾರಿ ಆದೇಶದಂತೆ ಮಿಡ್ ನೈಟ್ ಹಾಗೂ ಮಾರ್ನಿಂಗ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಪುಷ್ಪ-2 ಪ್ರದರ್ಶನ ರದ್ದು ಮಾಡಿರುವ ಚಿತ್ರಮಂದಿರಗಳು, ಬೆಳಗ್ಗೆ ಆರು ಗಂಟೆ ಪುಷ್ಪ-2 ಸಿನಿಮಾ ಪ್ರದರ್ಶನ ಎಂದಿನಂತೆ ಇರಲಿದೆ, ರದ್ದಾಗಿರುವ ಶೋಗಳ ಅಮೌಂಟ್ ರೀಫಂಡ್ ಮಾಡಬಹುದು, ಇಲ್ಲ ಮುಂದಿನ ಶೋಗೂ ಕಂಟಿನ್ಯೂ ಮಾಡಬಹುದು ಎಂದು ತಿಳಿಸಿವೆ.
ನಿಯಮಾವಳಿ ಪ್ರಕಾರ ಬೆಳಗ್ಗೆ 6.30ರ ನಂತರವಷ್ಟೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ