ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶೌಚಾಲಯದ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿದ್ದು ಹಲ್ಲೆಗೊಳಗಾದವರ ದೂರು ದಾಖಲಿಸಿಕೊಳ್ಳಲು ಕುಡುಚಿ ಪೊಲೀಸರು ಹಿಂದೆಟ್ಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನ್ಯಾಯ ಕೋಡಿ ಇಲ್ಲ ನಮಗೆ ದಯಾಮರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವಕಾಶ ಕೊಡಬೇಕೆಂದು ಕುಟುಂಬ ಸಮೇತ ಮನವಿ ಮಾಡಿದ್ದಾರೆ.
ಕುಡಚಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿರುವ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದಿದ್ದ ಘಟನೆ ನಡೆದಿದೆ. ವಸಂತ ಕಾಂಬಳೆ,ಭೀಮಪ್ಪ ಕಾಂಬಳೆ ಅಶೋಕ್,ಹಾಗೂ ಪಾರೇಶ ಕಾಂಬಳೆ ಎಂಬುವವರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ತಮ್ಮಣ್ಣ ಕಾಂಬಳೆ ಹಾಗೂ ಕುಟುಬಸ್ಥರ ಮೇಲೆ ಹಲ್ಲೆ ಆರೋಪ ಬಂದಿದ್ದು ನ್ಯಾಯ ಒದಗಿಸಿ ಎಂದು ಎಸ್ಪಿ ಕಚೇರಿಗೆ ಬಂದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.ದಯಾಮರಣಕ್ಕೆ ಅವಕಾಶ ನೀಡಿ ಎಂದು ಕುಟುಂಬಸ್ಥರು ಬೇಡಿಕೊಳ್ತುತ್ತಿದ್ದಾರೆ.
ಮಡದಿ ಮಕ್ಕಳೊಂದಿಗೆ ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲಿರುವ ಕುಟುಂಬ ನ್ಯಾಯಕ್ಕಾಗಿ ಎಸ್ಪಿ ಕಚೇರಿಯ ಮುಂದೆ ಕುಟುಂಬಸ್ಥರು ಗೋಳಾಟ ನಡೆಸಿದ್ದಾರೆ. ಕುಡಚಿ ಪೊಲೀಸರು ದೂರು ಸ್ವೀಕರಿಸಿದ ಆರೋಪ ಮಾಡುತ್ತಿರುವ ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದರೂ ಇಲ್ಲಿಯೂ ಸಹ ನಮಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ