Latest

ನಟಿ ಮಾಳವಿಕಾ ಮುಖವನ್ನೇ ಬದಲಿಸಿದ ಮೈಗ್ರೇನ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮನುಷ್ಯನನ್ನು ಕಿತ್ತು ಕಾಡಲು ದೊಡ್ಡ ಕಾಯಿಲೆಗಳೇ ಬೇಕಿಲ್ಲ. ಸಣ್ಣಪುಟ್ಟದೆಂದು ನಿರ್ಲಕ್ಷ್ಯಿಸುವ ನೋವುಗಳೂ ದೊಡ್ಡ ವ್ಯಾಧಿಗಳಾಗಿ ಕಾಡಬಹುದು. ಅದಕ್ಕೆ ನಟಿ ಮಾಳವಿಕಾ ಉದಾಹರಣೆಯಾಗಿದ್ದಾರೆ.

ಕಳೆದ ಹಲವು ದಿನಗಳಿಂದ ವಿಪರೀತವಾದ ಮೈಗ್ರೇನ್ ಮಾಳವಿಕಾ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಇದಕ್ಕೂ ಮುಖ್ಯ ವಿಷಯವೆಂದರೆ ಸದಾ ಅಪ್ಪಟ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮಾಳವಿಕಾ ಆಕರ್ಷಕ ಮುಖಚಹರೆಯನ್ನೇ ಬದಲಾಯಿಸಿಬಿಟ್ಟಿದೆ.
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಹೊಂದಿರುವ, ಕಾನೂನು ಪದವೀಧರೆ ಮಾಳವಿಕಾ ಅವರು ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಕೆಜಿಎಫ್ ಸಿನೆಮಾ ಅವರಿಗೆ ವಿಶೇಷ ಖ್ಯಾತಿ ತಂದುಕೊಟ್ಟಿದೆ.

ತಮ್ಮ ಈಗಿನ ಫೋಟೊಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿರುವ ಮಾಳವಿಕಾ “ಮೈಗ್ರೇನ್ ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಪಾನಡೋಲ್‍ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಮೈಗ್ರೇನ್ ಅಂದರೆ ಕೇವಲ ತಲೆನೋವು ಮಾತ್ರವಲ್ಲ. ಅದನ್ನು ನಿರ್ಲಕ್ಷ್ಯಿಸಿದರೆ ನೀವೂ ನನ್ನ ಹಾಗೆ ಆಸ್ಪತ್ರೆ ಸೇರುತ್ತೀರಿ” ಎಂದು ಎಲ್ಲರಿಗೂ ಜಾಗೃತಿ ಕರೆ ನೀಡಿದ್ದಾರೆ.

Home add -Advt
https://pragati.taskdun.com/mass-resignation-of-office-bearers-in-belagavi-rural/
https://pragati.taskdun.com/shakib-the-first-player-to-win-the-icc-player-of-the-month-award-twice/

https://pragati.taskdun.com/contesting-as-a-non-party-candidate-astagi/

Related Articles

Back to top button