Latest

ಐಪಿಎಲ್‌ಗೆ ಹೆಸರು ನೋಂದಾಯಿಸಿದ ಭೂತಾನ್‌ನ ಮೊದಲ ಕ್ರಿಕೇಟ್ ಆಟಗಾರನಿಗೆ ಎಂ. ಎಸ್. ಧೋನಿ ಕಿವಿಮಾತು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಪಾರ ಜನಪ್ರಿಯತೆ ಪಡೆದಿರುವ ಐಪಿಎಲ್‌ನಲ್ಲಿ ವಿಶ್ವದ ನಾನಾ ದೇಶಗಳ ಕ್ರಿಕೇಟ್ ಆಟಗಾರರು ಪಾಲ್ಗೊಳ್ಳಲು ಹಾತೊರೆಯುತ್ತಾರೆ. ಖ್ಯಾತಿಯ ಜೊತೆಗೆ ಹೇರಳ ಹಣವನ್ನೂ ಕ್ರಿಕೇಟ್ ಆಟಗಾರರಿಗೆ ಐಪಿಎಲ್ ತಂದುಕೊಡುತ್ತಿದೆ.

ಈ ನಡುವೆ ಭೂತಾನ್‌ನ ಯುವ ಕ್ರಿಕೇಟಿಗರೊಬ್ಬರು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ನೋಂದಾಯಿಸಿದ್ದಾರೆ. ಇವರು ಯವುದೇ ತಂಡಕ್ಕೆ ಆಯ್ಕೆಯಾದರೂ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಭೂತಾನ್‌ನ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಮೈಕಿಯೋ ದೋರ್ಜಿ ((mikyo dorji) ಐಪಿಎಲ್‌ಗೆ ಹೆಸರು ನೋಂದಾಯಿಸಿದ ಭೂತಾನ್ ಕ್ರಿಕೇಟಿಗ. ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಬರದುಕೊಂಡಿರುವ ಅವರು, ಭಾರತದ ಮಾಜಿ ನಾಯಕ ಎಂ. ಎಸ್. ಧೋನಿ ತಮಗೆ ಹೇಳಿದ ಕಿವಿಮಾತನ್ನೂ ಸಹ ಉಲ್ಲೇಖಿಸಿದ್ದಾರೆ. ಫಲಿತಾಂಶ ಏನೂ ಇರಲಿ ಆಟದ ಮೇಲೆ ಲಕ್ಷ್ಯಯ ಕೊಡುವಂತೆ ಧೋನಿ ತನಗೆ ಸಲಹೆ ನೀಡಿದ್ದಾರೆ. ಅವರ ಈ ಅತ್ಯುತ್ತಮ ಸಲಹೆಯನ್ನು ತಾನು ಪಾಲಿಸುತ್ತೇನೆ ಎಂದು ಮೈಕಿಯೊ ಹೇಳಿಕೊಂಡಿದ್ದಾರೆ.
ಜ.31ರಿಂದ ರಾತ್ರಿ ಕರ್ಫ್ಯೂ ತೆರವು; ಹಲವು ಮಾರ್ಗಸೂಚಿ ಸಡಿಲಿಕೆ

Home add -Advt

Related Articles

Back to top button