ಪ್ರಗತಿವಾಹಿನಿ ಸುದ್ದಿ; ಫಿಲಿಪೈನ್ಸ್: 92 ಮಂದಿಯನ್ನು ಕರೆದೊಯ್ಯುತ್ತಿದ್ದ ಸೇನಾ ವಿಮಾನ ಪಾನಗೊಂಡು ಹಲವು ಯೋಧರು ಸಾವನ್ನಪ್ಪಿರುವ ಘಟನೆ ದಕ್ಷಿಣ ಫಿಲಿಪೈನ್ಸ್ ನಲ್ಲಿ ನಡೆದಿದೆ.
ಪ್ರಸ್ತುತ 40 ಜನರನ್ನು ರಕ್ಷಣೆ ಮಾಡಲಾಗಿದ್ದು, ಈವರೆಗೆ 17 ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಫಿಲಿಪೈನ್ಸ್ ವಾಯುಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಾಕ್ ಹೆಡ್ ಸಿ-130 ವಿಮಾನ ಲ್ಯಾಂಡಿಂಗ್ ಆಗುವ ವೇಳೆ ರನ್ ವೇ ಮಿಸ್ ಆಗಿ ಈ ದುರಂತ ಸಂಭವಿಸಿದೆ. ಏರ್ ಪೋರ್ಟ್ ನಿಂದ ಕೆಲ ಕಿಲೋಮೀಟರ್ ದೂರದಲ್ಲೇ ದುರಂತ ಸಂಭವಿಸಿದೆ ಎಂದು ಚೀಫ್ ಆಫ್ ಸ್ಟಾಫ್ ಜನರಲ್ ಸಿರಿಲಿಟೋ ಸೋಬ್ಜಾನಾ ತಿಳಿಸಿದ್ದಾರೆ.
ಶಾಸಕ ಪರಮೇಶ್ವರ್ ನಾಯ್ಕ್ ಸಹೋದರನ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ