Karnataka NewsLatest

ರಣವೀರ್ ನಗ್ನಾವತಾರ ಕಂಡು ಮಿಮಿ ಕೇಳಿದ್ದೇನು ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಇಡೀ ಜಾಲತಾಣವೇ ಜೋಲಿ ಹೊಡೆಯುವಂತೆ ಮಾಡಿದ ನಟ ರಣವೀರ್ ಸಿಂಗ್ ‘ನಗ್ನಾವತಾರ’ ಕಂಡ ನಟಿ, ರಾಜಕಾರಣಿ ಮಿಮಿ ಚಕ್ರವರ್ತಿ ಸಮುದಾಯಕ್ಕೊಂದು ಸವಾಲೆಸೆದಿದ್ದಾರೆ. 

“ಆಶ್ಚರ್ಯವಾಗುತ್ತಿದೆ.. ಒಬ್ಬ ಮಹಿಳೆಗೂ ಇಂಥ ಪೋಸ್ ಗೆ  ಇದೇ ರೀತಿಯ ಶ್ಲಾಘನೆ ಇರುತ್ತಾ?” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಇದೇ ರೀತಿ ಮಹಿಳೆಯೊಬ್ಬಳು ಮಾಡಿದ್ದರೆ ಅಂಥವಳ ಮನೆ ಸುಡುತ್ತಿದ್ದಿರಿ,  ಆಕೆ ವಿರುದ್ಧ ಮೋರ್ಚಾಗಳು ನಡೆಯುತ್ತಿದ್ದವು, ಜೀವ ಬೆದರಿಕೆ ಹಾಕುವುದಲ್ಲದೆ ಅವಮಾನ ಮಾಡಲಾಗುತ್ತಿತ್ತು. ನಾವು ಸಮಾನತೆ ಬಗ್ಗೆ ಮಾತನಾಡುತ್ತೇವೆ. ಈಗ ಅದು ಎಲ್ಲಿದೆ? ನಿಮ್ಮ ದೃಷ್ಟಿಕೋನ ಹೇಗಿದೆ ಎಂದರೆ ಅದು ಏನನ್ನಾದರೂ ಬದಲಾಯಿಸಬಹುದು, ಇಲ್ಲವೇ ಸರ್ವನಾಶ ಮಾಡಬಹುದು” ಎಂದು ಕುಟುಕಿದ್ದಾರೆ.

ಬೈಕ್ ಕದ್ದವ ಸೀದಾ ಹೋಗಿ ಸಿಕ್ಕಿದ್ದು ಪೊಲೀಸರ ಕೈಗೆ!

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button