
ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮಗನ ಅಪ್ರಾಪ್ತ ವಯಸ್ಸಿನ ಪ್ರಿಯತಮೆ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ತಾಲೂಕಿನ ಬಾಳೆಹೊನ್ನೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರಿಯಕರನನ್ನು ನೋಡಲೆಂದು ಆತನ ಮನೆಗೆ ಬಂದ ಅಪ್ರಾಪ್ತ ಯುವತಿಗೆ ಆತ ಕೆಲಸಕ್ಕೆ ಹೋಗಿದ್ದಾನೆ ಬರುವುದು ರಾತ್ರಿಯಾಗುತ್ತೆ. ನೀನು ಮನೆಯಲ್ಲಿಯೇ ಮಲಗು ಎಂದು ಹೇಳಿ ಪ್ರಿಯಕರನ ತಂದೆ ಆಕೆಯನ್ನು ಉಳಿಸಿಕೊಂಡಿದ್ದ. ಈ ವೇಳೆ ಯುವತಿ ಮೇಲೆ ಪ್ರಿಯಕರನ ತಂದೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಬಾಳೆಹೊನ್ನೂರು ಠಾಣೆ ಪೊಲೀಸರು ಪ್ರಿಯಕರನ ತಂದೆಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ
ಪತಿ ವಿರುದ್ಧ ಕಿರುತೆರೆ ನಟಿ ಅತ್ಯಾಚಾರ ಆರೋಪ