Politics

*ಬ್ರದರ್ ಸ್ವಾಮಿ ಹೇಳಿಕೊಟ್ಟ ಮಾತು, ಪ್ರತಿ ಮಾತಲ್ಲೂ “ದೊಡ್ಡವರ“ ಚಿತಾವಣೆ ಇದೆ; ದೇವರಾಜೇಗೌಡ ವಿರುದ್ಧ ಕಾಂಗ್ರೆಸ್ ಕಿಡಿ*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ 100 ಕೋಟಿ ಆಫರ್ ನೀಡಿರುವ ಆರೋಪ ಮಾಡಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ದಿನಕ್ಕೊಂದು ಮಾತಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

ಎಸ್ಐಟಿ ಅಧಿಕಾರಿಗಳು ದೇವರಾಜೇಗೌಡರಿಗೆ ಮಾನಸಿಕ ಚಿಕೆತ್ಸೆ ಕೊಡಿಸುವುದು ಒಳ್ಳೆಯದು! ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು ದೇವರಾಜೇಗೌಡ ಆಡಿದ್ದಾರೆ, ಆತನ ಬಾಯಲ್ಲಿ ಬರುವ ಪ್ರತಿ ಮಾತುಗಳಲ್ಲೂ “ದೊಡ್ಡವರ“ ಚಿತಾವಣೆ ಇರುತ್ತದೆ ಎಂದು ಆರೋಪಿಸಿದೆ.

Home add -Advt

ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು! ಇದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿರುವಾಗ ಅವರ ಮಾತುಗಳಿಗೆ ಗಾಂಬೀರ್ಯತೆಯನ್ನು, ಸತ್ಯವನ್ನು ಹುಡುಕುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಹೇಳಿದೆ.

Related Articles

Back to top button