Belagavi NewsBelgaum NewsElection NewsKannada NewsKarnataka NewsPolitics

ಭಾಷಣದ ವೇಳೆ ಕೈಯಿಂದ ಡಯಾಸ್ ಮೇಲೆ ಗುದ್ದಿದ ಸಚಿವ ಜಮೀರ್: ಡಯಾಸ್ ಗಾಜು ಪೀಸ್ ಪೀಸ್

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಸಚಿವ ಜಮೀರ್‌ ಅಹ್ಮದ್‌ ಅವರು ಗೋಕಾಕ ನಗರದಲ್ಲಿ ಇಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಡಯಾಸ್‌ ಕೈಯಿಂದ ಹೊಡೆದಿದ್ದಾರೆ. ಈ ವೇಳೆ ಡಯಾಸ್ ನ ಗಾಜು ಪೀಸ್ ಪೀಸ್ ಆಗಿರುವ ಘಟನೆ ನಡೆದಿದೆ.‌

ಜಮೀರ್‌ ಅವರು ಇಂದು ಬೆಳಗಾವಿಯ ಗೋಕಾಕ್ ನಗರದ ಕೆ.ಜಿ ಎನ್ ಹಾಲ್‌ ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಭಾಷಣದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಭಾಷಣ ಮಾಡಿದ ಅವರು, ಸಾರೇ ಜಹಾಂಸೇ ಅಚ್ಚಾ ಎಂದು ಹೇಳುತ್ತ ನಾವೆಲ್ಲಾ ಒಂದು. ದೇಶ ನಮ್ಮೆಲ್ಲರದ್ದು, ನಮ್ಮೆಲ್ಲರದ್ದು ಎನ್ನುತ್ತಾ ಜಮೀರ್‌ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್ ಗೆ ಅಳವಡಿಸಿದ ಗಾಜು ಒಡೆದು ಚೂರಾಗಿದೆ. ಗಾಜು ಪೀಸ್ ಪೀಸ್ ಆಗುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button