*ಮಾಜಿ ಸಚಿವ ಹೆಚ್.ವೈ. ಮೇಟಿಗೆ ಅಂತಿಮ ನಮನ ಸಲ್ಲಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ.ಮೇಟಿ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಾಪ ಸೂಚಿಸಿದ್ದಾರೆ.
ಹಿಂದೆ ನಮ್ಮ ಪಕ್ಷ ಅಧಿಕಾರಲ್ಲಿದ್ದಾಗ ಮೇಟಿ ಅವರು ಸಚಿವರಾಗಿದ್ದರು. ಆಗ ನಾನು ಇನ್ನೂ ಎಮ್ ಎಲ್ ಎ ಆಗಿರಲಿಲ್ಲ. ಈ ವೇಳೆ ನನಗೆ ಅನೇಕ ಕೆಲಸಗಳನ್ನ ಮಾಡಿಕೊಟ್ಟಿದ್ದಾರೆ. ಅವರ ಸಮಾಜದಲ್ಲೂ ಅವರಿಗೆ ಅವರದ್ದೇ ಆದ ಸ್ಥಾನಮಾನ ಇತ್ತು. ಆ ಭಾಗದ ಜ್ವಲಂತ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿ ಎಚ್.ವೈ.ಮೇಟಿ ಅವರಿಗೆ ಇತ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮೇಟಿ ಅವರು, ಪಕ್ಷದ ಹಿರಿಯ ಮುಖಂಡರು, ಪಕ್ಷದಲ್ಲಿ ಸಚಿವರಾಗಿದ್ದವರು. ಮೇಟಿ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಕೊಡಲಿ ಎಂದು ಪ್ರಾರ್ಥಿಸುವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಅಂತಿಮ ನಮನ ಸಲ್ಲಿಸಿದ ಸಚಿವರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಮಾಜಿ ಸಚಿವ, ಶಾಸಕ ಎಚ್ ವೈ ಮೇಟಿ ಅವರ ನಿವಾಸಕ್ಕೆ ಮಂಗಳವಾರ ತೆರಳಿ, ಮೇಟಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.



