Kannada NewsKarnataka NewsLatest

ಎಲ್ಲಾ ಪರೀಕ್ಷೆಗಳು ಮುಂದಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಷ್ಕರದ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಪ್ರಿಲ್ 7ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.

ಸ್ನಾತಕ, ಸ್ನಾತಕೋತ್ತರ ಹಾಗೂ ಎಂಬಿಎ ಪರೀಕ್ಷೆಗಳನ್ನು ಮುಂದೂಡಿ ಪ್ರಕಟಣೆ ಹೊರಡಿಸಲಾಗಿದೆ.

ಸ್ನಾತಕ ಪರೀಕ್ಷೆ ಏಪ್ರಿಲ್ 15ರಂದು ನಡೆಯಲಿದೆ. ಸ್ನಾತಕೋತ್ತರ ಪರೀಕ್ಷೆ ಏಪ್ರಿಲ್ 26ರಂದು ಹಾಗೂ ಎಂಬಿಎ ಪರೀಕ್ಷೆ ಏಪ್ರಿಲ್ 25ರಂದು ನಡೆಯಲಿದೆ.

ಉಳಿದ ಯಾವುದೇ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ. ಅವುಗಳು ವೇಳಾಪಟ್ಟಿಯಂತೆಯೇ ನಡೆಯಲಿವೆ ಎಂದು ತಿಳಿಸಲಾಗಿದೆ.

Home add -Advt

ವಿಶ್ವವಿದ್ಯಾಲಯದ ಸರ್ಕ್ಯೂಲರ್ ಇಲ್ಲಿದೆ –  circular _0001

 

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ‘ನಿರುಪಮ’ ಸಿಂಹ ದತ್ತು ಸ್ವೀಕಾರ

Related Articles

Back to top button