Belagavi NewsBelgaum NewsKannada NewsKarnataka NewsNationalPolitics
*ವಿಶೇಷ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶಪುರದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ದೇವರಿಗೆ ನೈವೇದ್ಯ ಸಮರ್ಪಿಸಿ, ಮಹಾಪ್ರಸಾದ ಸೇವೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲೇಶ್ ಚೌಗುಲೆ, ರಾಜು ದಂಡಗಲ್ಕರ್, ತಿಪ್ಪಣ್ಣ ದಂಡಗಲ್ಕರ್, ರಾಜೇಶ್ ನಾಯಿಕ್, ವಿಠ್ಠಲ ವಡ್ಡರ, ಬಾಳಕೃಷ್ಣ ದಂಡಗಲ್ಕರ್, ಮಹೇಶ್ ಕೋಲಕಾರ, ನಿಖಿತಾ ದಂಡಗಲ್ಕರ್, ಬೋಸಲೆ ಸರ್, ಚೌಡಪ್ಪ ದಂಡಗಲ್ಕರ್, ಭೀಮಾ ಮಂಜಲಕರ್, ಪ್ರಕಾಶ ದಂಡಗಲ್ಕರ್ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

