Belagavi NewsBelgaum NewsKarnataka NewsPolitics

*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಬಲ ತುಂಬುವ ಕೆಲಸ : ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ  ವಿಕೇಂದ್ರೀಕರಣ ವ್ಯವಸ್ಥೆಯ ಅತ್ಯಂತ ಪ್ರಮುಖ ಮತ್ತು ಮೊದಲ ಹಂತದ ವ್ಯವಸ್ಥೆಗೆ ಬಲ ತುಂಬುವಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. 

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಡಿಗೇರಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಕೆಳ ಹಂತದ ಮತ್ತು  ಜನರಿಗೆ ಹತ್ತಿರವಾದ ಆಡಳಿತ ವ್ಯವಸ್ಥೆ ಗ್ರಾಮ ಪಂಚಾಯಿತಿ. ಹಾಗಾಗಿ ಈ ವ್ಯವಸ್ಥೆ ಬಲವಾದಲ್ಲಿ ಗಾಂಧೀಜಿಯವರು ಕಂಡ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ. ಗ್ರಾಮ ಪಂಚಾಯತ್ ಸ್ಥಳೀಯ ಅಗತ್ಯಗಳನ್ನು ಪೂರೈಸುವಲ್ಲಿ,ಪಾರದರ್ಶಕತೆಯನ್ನು ತರುವಲ್ಲಿ ಮತ್ತು ಸರ್ವರ ಜವಾಬ್ದಾರಿಯನ್ನು ಖಾತರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳ ಹೊಣೆಗಾರಿಕೆ ಅತ್ಯಂತ ಪ್ರಮುಖವಾದದ್ದು ಎಂದು ಅವರು ಹೇಳಿದರು.

 ಆಡಳಿತ ಜನರಿಗೆ ಇನ್ನಷ್ಟು ಹತ್ತಿರವಾಗಬೇಕು, ಜನರಿಗೆ ಸರಿಯಾಗಿ ಸೌಲಭ್ಯಗಳು ಸಿಗಬೇಕು ಎಂದಾದರೆ ಸುಸಜ್ಜಿತವಾದ ಆಡಳಿತ ಕಟ್ಟಡ ಕೂಡ ಅಗತ್ಯ. ಇದೊಂದು ಕೇವಲ ಕಟ್ಟಡ ಎನ್ನುವುದಕ್ಕಿಂತ ಇಡೀ ಗ್ರಾಮದ ಅಭಿವೃದ್ಧಿಯ ಸಂಕೇತ ಎಂದು ನಾನು ಪರಿಗಣಿಸುತ್ತೇನೆ. ಗ್ರಾಮದ ಜನರ ಕಷ್ಟ, ಸುಖಗಳಿಗೆ ಕಿವಿಯಾಗಿ, ಅವುಗಳನ್ನು ಪರಿಹರಿಸುವ ಕೈ ಆಗಿ ಗ್ರಾಮ ಪಂಚಾಯಿತಿಯ ಈ ಕಟ್ಟಡ ಕೆಲಸ ಮಾಡಬೇಕು. ಈ ಕಟ್ಟಡವು ಸ್ಥಳೀಯ ಆಡಳಿತ,ಸಮುದಾಯದ ಸಹಭಾಗಿತ್ವ ಮತ್ತು ಸಾರ್ವಜನಿಕ ಸೇವೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಚನ್ನರಾಜ ಹೇಳಿದರು.

Home add -Advt

ಗ್ರಾಮ ಪಂಚಾಯತ್ ಸ್ಥಾಪನೆಯ ಉದ್ದೇಶ ಈಡೇರಿಸುವಲ್ಲಿ ಈ ಕಟ್ಟಡ ಸಕಾರಾತ್ಮಕ ಕಾರ್ಯ ನಿರ್ವಹಿಸಲಿ ಎಂದು ಆಶಿಸುತ್ತೇನೆ.ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದರು. 

ಗ್ರಾಮಗಳು ಸಬಲೀಕರಣಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು.ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರಕಾರ ವಿಕೇಂದ್ರೀಕರಣ ವ್ಯವಸ್ಥೆಯ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದೆ.ಗ್ರಾಮ ಸಭೆಗಳ ಮೂಲಕವೇ ಫಲಾನುಭವಿಗಳ ಆಯ್ಕೆ ಆಗಬೇಕೆಂದು ನಾವು ಬಯಸುತ್ತೇವೆ. ಮಹಾತ್ಮಗಾಂಧಿಯವರಿಗೆ ದೂರದೃಷ್ಟಿ ಇರುವುದರಿಂದಲೇ  ಗ್ರಾಮಗಳ ಸುಧಾರಣೆಯಿಂದ ಮಾತ್ರ ದೇಶದ ಅಭಿವೃದ್ದಿ ಎಂದಿದ್ದರು. ಗ್ರಾಮ ರಾಜ್ಯವೇ ರಾಮರಾಜ್ಯ ಎಂಬ ಕನಸು ಕಂಡಿದ್ದರು. ಅದರಂತೆ ನಮ್ಮ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮುಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಂಕ್ರಯ್ಯ ಸುರಗಿಮಠ್, ಮಲ್ಲಯ್ಯ ಹಿರೇಮಠ್ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾನಂದ ಚಂಡು, ಉಪಾಧ್ಯಕ್ಷರಾದ ಅನ್ನಪೂರ್ಣ ಕುಂಬಾರ್, ಸದಸ್ಯರಾದ ಶಂಕರಗೌಡ ಮೇಳೆದ್, ದುರದುಂಡಪ್ಪ ಮೇಳೆದ್, ನೀಲಪ್ಪ ಅರಗಂಜಿ, ಸಂಗಪ್ಪ ಕುಡಚಿ, ಬಸವ್ವ ಚವ್ಹಾಣ, ಲಕ್ಷ್ಮಿ ತಳವಾರ್, ಶಕುಂತಲಾ ದೊಡಮನಿ, ನೀಲವ್ವ ಹುಲಿಕವಿ, ಪಿಡಿಒ ನಾಗೇಂದ್ರ ಪತ್ತಾರ, ಸಿದ್ದಣ್ಣ ಹಾವಣ್ಣವರ್, ಪ್ರಕಾಶ ಪಾಟೀಲ, ರವಿ ಮೇಳೆದ್, ಮುರಸಿದ್ದ ಬಾಳೇಕುಂದರಗಿ, ಚಂದ್ರಪ್ಪ ಉಪ್ಪಿನ, ಸಂತೋಷ ಅಂಗಡಿ, ಬಸವರಾಜ ಡಮ್ಮಣಗಿ, ವೀರೇಂದ್ರ ಮೇಳೆದ್, ಶ್ರೀಕಾಂತಗೌಡ ಪಾಟೀಲ, ಗುತ್ತಿಗೆದಾರರಾದ ಶಿವಾನಂದ ಮಾಳಾಯಿ, ವಿಠ್ಠಲ ದೊಡಮನಿ ಹಾಗೂ ಸಮಸ್ತ ಬೆಂಡಿಗೇರಿ ಗ್ರಾಮಸ್ಥರು ಇದ್ದರು.

Related Articles

Back to top button