Latest

ಮಹಿಳೆಯನ್ನು ಅವಾಚ್ಯ ಶ್ಯಬ್ಧಗಳಿಂದ ನಿಂದಿಸಿದ ಕಾನೂನು ಸಚಿವರಿಗೆ ಸಿಎಂ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆ ಬಗ್ಗೆ ಅವಾಚ್ಯ ಶ್ಯಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ ವಿರುದ್ಧ ಗರಂ ಆಗಿರುವ ಸಿಎಂ ಯಡಿಯೂರಪ್ಪ, ಹೆಣ್ಣು ಮಗಳ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ, ಇನ್ನುಮುಂದೆ ಈರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ರೆಫರಲ್ ಆಸ್ಪತ್ರೆ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಹೆಣ್ಣು ಮಗಳ ಬಗ್ಗೆ ಹಾಗೇ ಮಾತಾಡೋದು ಸರಿಯಲ್ಲ. ಆ ಹೆಣ್ಣು ಮಗಳನ್ನು ಕರೆದು ಮಾತನಾಡುತ್ತೇನೆ. ಮತ್ತೆ ಹೀಗೆ ಮಾತನಾಡಬೇಡಿ ಎಂದು ಸಚಿವರಿಗೆ ವಾರ್ನ್ ಮಾಡಿದ್ದೇನೆ ಎಂದರು.

ಸಚಿವ ಮಾಧುಸ್ವಾಮಿ ಅವರು ರೈತ ಸಂಘದ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ `ಏಯ್ ಮುಚ್ಚು.. ಬಾಯಿ ರ್ಯಾಸ್ಕಲ್’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದರು.

ಕೆ.ಸಿ.ವ್ಯಾಲಿ ಸಂಬಂಧ ಕೆರೆಗಳ ವೀಕ್ಷಣೆಗೆ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ ಬಳಿ ತೆರಳಿದ್ದರು. ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿಯವರು ಅವಾಚ್ಯ ಪದ ಬಳಕೆ ಮಾಡಿದ್ದರು.

Home add -Advt

Related Articles

Back to top button