Kannada NewsKarnataka News

ಸಂಜೆ ರಾಜೀನಾಮೆ ಸಲ್ಲಿಸಲಿರುವ ಸಚಿವ ನಾಗೇಂದ್ರ 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭಾರೀ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸು ಮುಂದಾಗಿದ್ದು, ಇಂದು ಸಂಜೆ 7.30ಕ್ಕೆ ಮುಖ್ಯಮಂತ್ರಿಗಳಿಗೆ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ.

ವಾಲ್ಮಿಕಿ ನಿಗಮದಲ್ಲಿ 87 ಕೋಟಿ ರೂಪಾಯಿಯನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಲೂಟಿ ಹೊಡೆದಿದೆ. ಹಗರಣದಲ್ಲಿ ನಾಗೇಂದ್ರ ಅವರ ಕೈವಾಡವಿದೆ ಎಂದು ಈಗಾಗಲೇ ವಿಪಕ್ಷಗಳು ಆರೋಪಿಸಿ, ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಬೆನ್ನಲ್ಲೇ ಇಂದು ನಾಗೇಂದ್ರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಹಣ ವರ್ಗಾವಣೆಗಾಗಿ ಒತ್ತಡ ಹಾಕಿದ್ದಾರೆಂದು ಆರೋಪಿಸಿ ಡೆತ್​​​ ನೋಟ್​​ ಬರೆದಿಟ್ಟು ಅಧಿಕಾರಿ ರಾಜಶೇಖರ್​ ಶಿವಮೊಗ್ಗದಲ್ಲಿ ಸೂಸೈಡ್​ ಮಾಡಿಕೊಂಡಿದ್ದರು. ನಿಗಮದಲ್ಲಿ ಹಗರಣ ನಡೆದಿರುವುದಾಗಿ ಅವರು ಗಂಭೀರ ಆರೋಪ ಮಾಡಿದ್ದರು.

ಹಗರಣ ತೀವ್ರ ಸ್ವರೂಪ ಪಡೆದ ನಂತರದಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಘನತೆಗೆ ಧಕ್ಕೆ ಬಾರದೆಂದು ಸ್ವಯಂ ಪ್ರೇರಿತರಾಗಿ ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರು ಖಚಿತಪಡಿಸಿದ್ದರು.

ಇನ್ನು ಸ್ವಲ್ಪ ಹೊತ್ತಿನಲ್ಲಿ ನಾಗೇಂದ್ರ ಪತ್ರಿಕಾಗೋಷ್ಠಿ ನಡೆಸಲಿದ್ದು, ನಂತರ ಸಂಜೆ ರಾಜಿನಾಮೆ ಸಲ್ಲಿಸುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button